ಬಿಲ್ಲವರಿಗೆ ಗುರುಗಳ ಹೆಸರಿನಲ್ಲಿ ನಿಗಮ ಘೋಷಣೆ ಮಾಡಿದ ಸರ್ಕಾರ: ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ ಕೃತಜ್ಞತೆ vishwanews24

Featured, ಉಡುಪಿ

ಬಿಲ್ಲವರಿಗೆ ಗುರುಗಳ ಹೆಸರಿನಲ್ಲಿ ನಿಗಮ ಘೋಷಣೆ ಮಾಡಿದ ಸರ್ಕಾರ: ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ ಕೃತಜ್ಞತೆ

ಕಾಪು: ಬಿಲ್ಲವ ಈಡಿಗ ಸಮಾಜ ಹಲವಾರು ವರ್ಷಗಳಿಂದ ಬೇಡಿಕೆಯಿದ್ದ ನಾರಾಯಣ ಗುರು ಅಭಿವೃದ್ಧಿ ನಿಗಮದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿರುವ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕರಾವಳಿ ಭಾಗ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಯಲ್ಲಿ ಕೂಡ ಬಿಲ್ಲವ ಈಡಿಗ ಸಮಾಜ ಬಾಂಧವರಿದ್ದು ಹಲವಾರು ವರ್ಷಗಳಿಂದ ನಿಗಮ ಸ್ಥಾಪನೆಯ ಕುರಿತಾಗಿ ಮನವಿ ಸರ್ಕಾರಕ್ಕೆ ಸಲ್ಲಿಸಿದ್ದು ಇದೀಗ ಬಿಜೆಪಿ ಸರ್ಕಾರ ಮನವಿ ಪುರಸ್ಕರಿಸಿ ನಿಗಮ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ‌ ಘೋಷಣೆ ಮಾಡಿರುವುದು ಹರ್ಷ ತಂದಿದೆ ಎಂದರು.

Leave a Reply