ಬಿಸಿಸಿಐನ ನೂತನ 39ನೇ ಅಧ್ಯಕ್ಷರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ -Vishwanews24
ಮುಂಬೈ: ವಿಶ್ವದ ಅತೀ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐನ ನೂತನ 39ನೇ ಅಧ್ಯಕ್ಷರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಬುಧವಾರ ಅಧಿಕಾರ ವಹಿಸಿಕೊಂಡರು.
ಬಿಸಿಸಿಐನ ನೂತನ ಅಧ್ಯಕ್ಷರಾಗಿ 47ರ ಹರೆಯದ ಗಂಗೂಲಿ ಅಧಿಕಾರ ಸ್ವೀಕರಿಸಿದ್ದು, ಇದರಿಂದಾಗಿ ಮುಂದಿನ 9 ತಿಂಗಳ ಕಾಲ ಬಂಗಾಳದ ಹುಲಿ ಎಂದೇ ಖ್ಯಾತರಾಗಿರುವ ಗಂಗೂಲಿ ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಆಡಳಿತಾಧಿಕಾರಿ ಸಮಿತಿಯ 33 ತಿಂಗಳ ಆಡಳಿತ ಕೊನೆಗೊಂಡಂತಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ಮುಂದಿನ 11 ತಿಂಗಳವರೆಗೆ ಸೌರವ್ ಗಂಗೂಲಿಯವರಿಗೆ ವಹಿಸುವುದೆಂದು ಇತ್ತೀಚಿನ ಬಿಸಿಸಿಐ ಸಾಮಾನ್ಯ ಮಂಡಳಿ ಸಭೆಯಲ್ಲಿ ನೀಡಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯ 33 ತಿಂಗಳ ಆಳ್ವಿಕೆ ಇಂದಿಗೆ ಅಂತ್ಯವಾಗಿದೆ. ಈ ಮೂಲಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂದು ಕಳೆದ ವಾರದ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
