Featured

ಬಿಹಾರದಲ್ಲಿ NDA ಅಧಿಕಾರಕ್ಕೆ ಬಂದ್ರೆ, ಅದು ದೇಶದ, ಬಿಹಾರ ಜನರ ದುರಾದೃಷ್ಟ : ರಾಮಲಿಂಗಾ ರೆಡ್ಡಿ – vishwanews24

20 ವರ್ಷಗಳಿಂದ NDA ಅವರು ಆಡಳಿತ ಮಾಡ್ತಿದ್ದಾರೆ, ಆದರೂ ಬಿಹಾರ ಅಭಿವೃದ್ಧಿ ಆಗಿಲ್ಲ

ಬಿಜೆಪಿ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಆಗ್ತಿದೆ..

2028ರಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ : ರಾಮಲಿಂಗಾ ರೆಡ್ಡಿ

ಬೆಂಗಳೂರು: ಬಿಹಾರದಲ್ಲಿ NDA ಅಧಿಕಾರಕ್ಕೆ ಬಂದರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ ಅಂತ ಸಚಿವ ರಾಮಲಿಂಗಾ ರೆಡ್ಡಿ  ಬೇಸರ ಹೊರಹಾಕಿದರು.

ಬಿಹಾರ ಚುನಾವಣೆ  ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಸಮೀಕ್ಷೆಯಲ್ಲಿ NDA ಮುನ್ನಡೆ ಕೊಡಲಾಗಿದೆ. ಒಂದು ವೇಳೆ ಬಿಹಾರದಲ್ಲಿ NDA ಬಂದ್ರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ. ಬಿಹಾರದಲ್ಲಿ 20 ವರ್ಷಗಳಿಂದ NDA ಅವರು ಆಡಳಿತ ಮಾಡ್ತಿದ್ದಾರೆ. ಆದರೂ ಬಿಹಾರ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಆಗ್ತಿದೆ. ಕೇಂದ್ರ ಸರ್ಕಾರ ಯಾಕೆ ಗಮನ ಕೊಡ್ತಿಲ್ಲ ಅಂತ ಕಿಡಿಕಾರಿದರು.

ಬಿಹಾರದ ಜನರು ಬೆಂಗಳೂರಿಗೆ ಬಂದು ಕೆಲಸ ಮಾಡ್ತಿದ್ದಾರೆ. ಅಲ್ಲಿ ಕೆಲಸ ಸಿಗದೇ ಇರೋದಕ್ಕೆ ಬರ್ತಿದ್ದಾರೆ. ಇದು ಅಭಿವೃದ್ಧಿ ಅಗ್ತಿಲ್ಲ ಅನ್ನೋದಕ್ಕೆ ಉದಾಹರಣೆ. ಬಿಹಾರ ರಾಜ್ಯ ಅಭಿವೃದ್ಧಿ ಆಗಿಲ್ಲ. ನಿರುದ್ಯೋಗ ಜಾಸ್ತಿ ಆಗಿದೆ. ಒಂದು ವೇಳೆ NDA ಅಧಿಕಾರಕ್ಕೆ ಬಂದ್ರೆ ಅದು ಬಿಹಾರ ಜನರ ದುರಾದೃಷ್ಟ ಅಂತ ಲೇವಡಿ ಮಾಡಿದರು.

ಇನ್ನೂ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ 2028ರಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ನುಡಿದರು.

ನಾವು ಅಭಿವೃದ್ದಿ ಕೆಲಸ ಮಾಡಿದ್ದೇವೆ, ಅದು ನಮಗೆ ಶ್ರೀರಕ್ಷೆ. ಬಿಜೆಪಿ-ಜೆಡಿಎಸ್ ವಿಪಕ್ಷದಲ್ಲಿ ನಾಯಕತ್ವ ಕೊರತೆ ಇದೆ. ಬಿಜೆಪಿ ಸೊರಗಿ ಹೋಗ್ತಿದೆ. ಬಿಜೆಪಿಗೆ ಈಗ ಇರೋ ಸ್ಥಾನವೂ ಮುಂದಿನ ಚುನಾವಣೆಯಲ್ಲಿ ಬರೊಲ್ಲ. ನಮ್ಮ ಪಕ್ಷ 136 ಸ್ಥಾನಕ್ಕಿಂತ ಜಾಸ್ತಿ ಸ್ಥಾನ ಬರ್ತೀವಿ‌ ಎಂದರು. ಇದೇ ವೇಳೆ 2028ಕ್ಕೆ ರಾಮಲಿಂಗಾರೆಡ್ಡಿ ಸಿಎಂ ಸ್ಥಾನದ ಆಕಾಂಕ್ಷಿ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ನಾನು ಯಾವತ್ತೂ ಸಿಎಂ ಆಗೊಲ್ಲ ಎಂದರು.

ನವೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಕ್ರಾಂತಿಯೂ ಇಲ್ಲ ಏನೂ ಇಲ್ಲ. ಬಿಜೆಪಿ ಅವರು ಸುಳ್ಳು ಮಾಹಿತಿ ಕೊಡ್ತಾರೆ. ನೀವು ತೋರಿಸ್ತೀರಾ ಅದಕ್ಕೆ ಬಿಜೆಪಿ ಅವರು ಮಾತಾಡ್ತಾರೆ. ಯಾವ ಕ್ರಾಂತಿಯೂ ಇಲ್ಲ ಅಂತ ಕುಟುಕಿದರು

Vishwa News 24

Recent Posts

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್  – vishwanews24

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…

17 hours ago

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

18 hours ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

18 hours ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

18 hours ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

18 hours ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

20 hours ago