ಬೀಡುಬದಿ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಮುನ್ನಾ ಯಾನೆ ಶಿವಾನಂದ ಪೂಜಾರಿ ನಾಳೆ ನಾಮಪತ್ರ ಸಲ್ಲಿಕೆ:vishwanews24

Featured, ಉಡುಪಿ

ಬೀಡುಬದಿ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಮುನ್ನಾ ಯಾನೆ ಶಿವಾನಂದ ಪೂಜಾರಿ ನಾಳೆ ನಾಮಪತ್ರ ಸಲ್ಲಿಕೆ: vishwanews24

ಕಾಪು: ಪುರಸಭಾ ಚುನಾವಣೆಯಲ್ಲಿ ಬೀಡುಬದಿ ವಾರ್ಡಿಗೆ ಪಕ್ಷೇತರ ಅಭ್ಯರ್ಥಿಯಾಗಿ ಮುನ್ನಾ ಯಾನೇ ಶಿವಾನಂದ ಪೂಜಾರಿಯವರು ಬುಧವಾರ ಬೆಳಗ್ಗೆ 10.30 ಕ್ಕೆ ಅಭಿಮಾನಿಗಳೊಂದಿಗೆ ಸಾಗಿ ಚುನಾವಣೆ ಸ್ಪರ್ಧಿಸಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆಂದು ಮೂಲಗಳು ತಿಳಿಸಿದೆ.
ಕಳೆದ ಹಲವಾರು ವರುಷಗಳಿಂದ ಹಿಂದೂ ಪರ ಸಂಘಟನೆಗಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಶಿವಾನಂದ ಈ ಭಾರಿ ಬಿಜೆಪಿ ಪಕ್ಷದಿಂದ ಸ್ಪರ್ದಿಸಲು ಉತ್ಸುಕರಾಗಿದ್ದರು ಆದರೇ ಪಕ್ಷ ಹಳೆಮುಖಗಳಿಗೆ ಅವಕಾಶ ನೀಡಿದೆ ಇದರಿಂದ ಮುನ್ನಾ ಯಾನೆ ಶಿವಾನಂದಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಲಿದ್ದಾರೆ.\