ಬುರ್ಖಾ ನಿಷೇಧಿಸಿದ ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆ; ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬಾರದೆಂಬ ಉದ್ದೇಶ :ಸಂಸ್ಥೆಯ ಅಧ್ಯಕ್ಷರು-Vishwanews24
ತಿರುವನಂತಪುರ: ಕೇರಳದ ಮುಸ್ಲಿಮ್ ಎಜುಕೇಶನ್ ಸೊಸೈಟಿ ತನ್ನ 150 ಶಾಲೆಗಳಲ್ಲಿ ಬುರ್ಖಾ ನಿಷೇಧಿಸಿಸುತ್ತೋಲೆ ಹೊರಡಿಸಿದೆ.
ಕೋಳಿಕೋಡ್ ಮೂಲದ ಈ ಶಿಕ್ಷಣ ಸಂಸ್ಥೆ ಪ್ರಸಕ್ತ ಸಾಲಿನಿಂದ ತನ್ನ ಶಾಲಾ ಆವರಣದಲ್ಲಿ ಯಾರೂ ಕೂಡಬುರ್ಖಾ ಧರಿಸಬಾರದೆಂಬ ನಿಯಮ ರೂಪಿಸಿ ಏ.17ರಂದು ಸುತ್ತೋಲೆ ಹೊರಡಿಸಿದೆ. ಈ ನಿಯಮವನ್ನುಬೋಧಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂಇಎಸ್ ಅಧ್ಯಕ್ಷ ಫಜಲ್ ಗಫೂರ್ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಒಳಿತಿಗಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರಸಂಹಿತೆ ಪಾಲನೆ ಕಡ್ಡಾಯವಾಗಿದೆ. ಜತೆಗೆ ಅಧೀನ ಶಾಲೆ-ಕಾಲೇಜುಗಳ ಮಂಡಳಿಗೂ ಸೂಚನೆ ನೀಡಿ, ಈ ನಿಯಮ ಪಾಲಿಸಲು ನೋಟಿಸ್ ಜಾರಿಮಾಡಲಾಗಿದೆ. ಶಿಕ್ಷಣ ಮತ್ತು ಕೇರಳದ ಮುಸ್ಲಿಂ ಸಮಾಜದಲ್ಲಿ ಅರಿವು ಮೂಡಿಸಲು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಶ್ರೀಲಂಕಾ ದಾಳಿಗೂ ಮೊದಲೇ ಈ ಕ್ರಮ ಜಾರಿಗೆ ಸೂಚನೆ ನೀಡಲಾಗಿತ್ತು ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
ನಾವು ಕೇರಳದಲ್ಲಿದ್ದೇವೆ. ಮಧ್ಯಪ್ರಾಚ್ಯದ (ಅರಬ್ ನಾಡಿನ) ಇಸ್ಲಾಮ್‌ನ್ನು ಅನುಸರಿಸಬೇಕಿಲ್ಲ. ಕಳೆದ 5ವರ್ಷದಲ್ಲಿ ಸಂಪ್ರದಾಯವಾದಿ ಮುಸ್ಲಿಂ ಸಂಘಟನೆಗಳು ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ಹೇರಲುಪ್ರಯತ್ನಿಸುತ್ತಿದ್ದು, ಇದನ್ನು ತಡೆಗಟ್ಟಬೇಕಿದೆ ಎಂದು ವೈದ್ಯರೂ ಆಗಿರುವ ಫಜಲ್ ಗಫೂರ್ ಹೇಳಿದ್ದಾರೆ.
ನಾವು ಧರಿಸುವ ಬಟ್ಟೆ ಸಭ್ಯವಾಗಿರಬೇಕು. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬಾರದೆಂಬ ಉದ್ದೇಶದಿಂದ ಈ ನಿಯಮ ಜಾರಿ ಮಾಡಲಾಗಿದೆ ಎಂದು ಮುಸ್ಲಿಮ್ ಎಜುಕೇಶನ್ ಸೊಸೈಟಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.
