ಬೃಹತ್ ಮಟ್ಟದ ಕೃಷಿ ಉಪಕರಣ ಸಾಲ ಮಾಡಿ ಕೊಳ್ಳುವುದು ಎಲ್ಲಾ ರೈತರಿಗೆ ಕಷ್ಟ ಕೆಲಸ : ಸಿ.ಎ ಸೊಸೈಟಿ ಖರೀದಿ ಮಾಡಿ ರೈತರಿಗೆ ಬಾಡಿಗೆ ನೀಡಿದ್ರೆ ಉತ್ತಮ : ಉದ್ಯಮಿ-ಕೃಷಿಕ ಮನೋಹರ್ ಶೆಟ್ಟಿ ಅಭಿಪ್ರಾಯ
ಕಾಪು ಸಹಕಾರಿ ವ್ಯವಸಾಯಿಕ ಸಂಘದ ತೆಂಗು-ಹೈನುಗಾರಿಕೆ-ಭತ್ತದ ಬೆಳೆ ಮಾಹಿತಿ ಕಾರ್ಯಗಾರ
ಹುತಾತ್ಮ ವೀರ ಯೋಧ ಬೀಜಾಡಿಯ ಅನುಪ್ ಪೂಜಾರಿಗೆ ಶೃದ್ದಾಂಜಲಿ ಸಲ್ಲಿಸಿ “ಜೈ ಜವಾನ್-ಜೈ ಕಿಸಾನ್” ಎಂದ ಕೃಷಿಕರು
kaup: ಕಾಪು ಸಹಕಾರಿ ವ್ಯವಸಾಯಿಕ ಸಂಘ (ನಿ.), ಕಾಪು ಆಶ್ರಯದಲ್ಲಿ ವೈಜ್ಞಾನಿಕ ತೆಂಗು ಬೇಸಾಯ ಮತ್ತು ಮಲ್ಲಿಗೆ ಕೃಷಿ, ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮಗಳು ಹಾಗೂ ಹೈನುಗಾರಿಕೆಯ ಬಗ್ಗೆ ಸಮಗ್ರ ಮಾಹಿತಿ ಕಾರ್ಯಕ್ರಮ ಮತ್ತು ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಲ್ಲಿನ ವೀರಭದ್ರ ಸಭಾಭವನದಲ್ಲಿ ನಡೆಯಿತು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲದ ಆಡಳಿತ ಮೊಕ್ತೆಸರರಾದ ಮನೋಹರ್ ಶೆಟ್ಟಿ ಉದ್ಘಾಟಿಸಿ ಮಾತಾನಾಡಿ” ಜೈ ಜವಾನ್ -ಜೈ ಕಿಸಾನ್ ಎಂಬ ಧೇಯ ವಾಕ್ಯಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ, ಕೃಷಿಕರಿಗೆ ಮಾಹಿತಿ ನೀಡುವುದರ ಜತೆಗೆ ಹುತಾತ್ಮರಾದ ಯೋಧನಿಗೆ ಗೌರವ ಸಲ್ಲಿಸಿದ್ದು ಶ್ಲಾಘನೀಯ, ಸದ್ಯದ ರಾಜಕಾರಣಿಗಳಿಗೆ ಕೃಷಿಕರ ಮೂಲ ಸಮಸ್ಯೆಗಳ ಬಗ್ಗೆ ಆಸಕ್ತಿ ಕಡಿಮೆಯಿರುವುದು ವಿಷಾದನೀಯವಾಗಿದೆ.ಯುವಕರು ಆದಷ್ಟು ಕೃಷಿ ಕ್ಷೇತ್ರಕ್ಕೆ ಬರಬೇಕು ಇದರಲ್ಲೂ ಕೂಡ ಪೈಪೋಟಿಯಿರಬೇಕು ಈ ಮುಖೇನ ಮುಂದಿನ ಜನಾಂಗಕ್ಕೆ ದಾರಿದೀಪವಾಗುವ ಕೆಲಸ ಮಾಡೋಣ ಎಂದರು.
ಬೃಹತ್ ಮಟ್ಟದ ಉಪಕರಣ ಸಾಲ ಮಾಡಿ ಕೊಳ್ಳುವುದು ಎಲ್ಲಾ ರೈತರಿಗೆ ಕಷ್ಟ ಕೆಲಸವಾಗಬಹುದು ಅದರ ಬದಲಿಗೆ ಸೊಸೈಟಿಯು ಈ ಯಂತ್ರಪೋಕರಣಗಳನ್ನ ಖರೀಧಿ ಮಾಡಿ ಗ್ರಾಮದ ರೈತರಿಗೆ ಬಾಡಿಗೆ ನೀಡುವುದರಿಂದ ಮತ್ತಷ್ಟು ಅನುಕೂಲವಾಗಲಿದೆ ಹಾಗೂ ಉತ್ತಮ ತಳಿಯ ಬೀಜಗಳ ಬಗ್ಗೆ ಕೂಡ ಸಿ.ಎ ಬ್ಯಾಂಕುಗಳು ಮಾಹಿತಿ ನೀಡುವ ಕಾರ್ಯಗಾರ ಆಯಾ ಸೊಸೈಟಿಯಲ್ಲಿ ಆಗಬೇಕೆಂದರು,ವಿಶೇಷವಾಗಿ ಕೃಷಿ ಸಾಲ ಯೋಜನೆ ಬಗ್ಗೆ ಏನಾದರೂ ಹೊಸ ಕಾನೂನ್ನು ಕೃಷಿಪತ್ತಿನ ಸೊಸೈಟಿಗಳು ಮಾಡಿಕೊಂಡರೆ ಉತ್ತಮ, ಗ್ರಾಮೀಣ ಭಾಗದಲ್ಲಿ ಅವಿಭಕ್ತ ಕುಟುಂಬಗಳು ಜಾಸ್ತಿಯಾಗಿರುವ ಪರಿಣಾಮವಾಗಿ ಕುಟುಂಬದಲ್ಲಿ ಎಲ್ಲರೂ ಹೊರ ರಾಜ್ಯದಲ್ಲಿ ದುಡಿಯುತ್ತಿರುತ್ತಾರೆ ಊರಿನಲ್ಲಿದ ಒಬ್ಬರು ಇಬ್ಬರು ಕೃಷಿ ಕಾಯಕದಲ್ಲಿ ತೊಡಗಿಕೊಂಡು ಇರುತ್ತಾರೆ ಆದರೆ ನೈಜ ರೈತನಿಗೆ ಸಾಲ ಸಿಗಲು ಕಷ್ಟವಾಗುತ್ತಿದೆ ಕಾರಣ ಪಹಣಿಪತ್ರಿಕೆಯಲ್ಲಿರುವ ಕುಟುಂಬದ ಸದಸ್ಯರ ಹತ್ತಾರು ಹೆಸರುಗಳಿರುವ ಪರಿಣಾಮವಾಗಿ ತಾಂತ್ರಿಕವಾಗಿ ಕಷ್ಟವಾಗುತ್ತೆ ಹೀಗಾಗಿ ಈ ಬಗ್ಗೆ ಕೂಡ ಸಿ.ಎ ಸೊಸೈಟಿಗಳು ಹೊಸ ನಿಯಮದ ಬಗ್ಗೆ ಗಮನಹರಿಸಿದಷ್ಟು ರೈತರಿಗೆ-ಯುವಕರಿಗೆ ಕೃಷಿಯ ಬಗ್ಗೆ ಹೆಚ್ಚಿನ ಒಲವು ಮೂಡಲು ಸಾದ್ಯವಿದೆ ಎಂದರು.
ಸAಪನ್ಮೂಲ ವ್ಯಕ್ತಿಗಳಾಗಿ ವೈಜ್ಞಾನಿಕ ತೆಂಗು ಬೇಸಾಯ ಕುರಿತಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮದ ಕುರಿತಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್, ಹೈನುಗಾರಿಕೆ ವಿಚಾರದಲ್ಲಿ ದ.ಕ ಹಾಲು ಒಕ್ಕೂಟದ ನಿವೃತ್ತ ಉಪ ವ್ಯವಸ್ಥಾಪಕ ಮಾಧವ ಐತಾಳ್ ಕೃಷಿಕರಿಗೆ ಮಾಹಿತಿ ನೀಡಿದರು.
ಕಾಪು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ” ೨೦೧೪ ರ ಸಮಯದಲ್ಲಿ ನಾನು ಅಧ್ಯಕ್ಷ ನಾಗಿ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ನಮ್ಮ ಬ್ಯಾಂಕ್ ಸಾಲದಲ್ಲಿ ಮುಳುಗಿ ಮುಚ್ಚಿಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು ತದನಂತರ ಹತ್ತು ವರ್ಷಗಳ ನಿರಂತರ ಹೋರಾಟದಿಂದಾಗಿ ಬ್ಯಾಂಕ್ ಸಾಲಮುಕ್ತವಾಗಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಅಧಿಕ ಪಾಲು ಬಂಡವಾಳ, ಮೂವತೈದು ಕೋಟಿ ಠೇವಣಿ,೨೩ ಕೋಟಿ ವಿವಿಧ ಸಾಲ,ಹದಿನೇಳು ಕೋಟಿ ರೂಪಾಯಿ ವಿವಿಧ ಹೂಡಿಕೆ ಮಾಡಿದೆ. ಈ ಎಲ್ಲಾ ಬೆಳವಣಿಗೆಯಲ್ಲಿ ಕೃಷಿಕರ ಪಾತ್ರ ಮಹತ್ವತ್ತಾಗಿದೆ ,ವಿಶೇಷವಾಗಿ ಕೃಷಿಕರಿಗೆ ಉಪಯೋಗವಾಗುವ ವಿವಿಧ ಉಪಕರಣ ಹಾಗೂ ಸಾಲದ ಕುರಿತಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಸೇನಾ ವಾಹನದ ಅವಘಡದಲ್ಲಿ ಮೃತಪಟ್ಟ ಕುಂದಾಪುರ ಬೀಜಾಡಿ ಗ್ರಾಮದ ಸೈನಿಕ ಅನೂಪ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ನಡೆಯಿತು
ಇದೇ ಸಂಧರ್ಭದಲ್ಲಿ ಉಳಿಯಾರು ಮಜೂರು ಗ್ರಾಮದ ಗುರುರಾಜ್ ಭಟ್,ಪಾಲುಮೆ ಪಾದೂರು ಗ್ರಾಮದ ನಿತ್ಯಾನಂದ ನಾಯಕ್,ಪಡುಗ್ರಾಮದ ಐತಪ್ಪ ಎಸ್ ಕೋಟ್ಯಾನ್,ಮೂಳೂರು ಗ್ರಾಮದ ಯೋಗಿಶ್ ಪೂಜಾರಿ,ಉಳಿಯಾರಗೋಳಿ ಗ್ರಾಮದ ಕೃಷ್ಣ ಶೇರಿಗಾರ,ಮಲ್ಲಾರು ಗ್ರಾಮದ ಜಗದೀಶ ದೇವಾಡಿಗ ಅವರಿಗೆ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿ ಪುರಸ್ಕರಿಸಲಾಯಿತು. ಕಾಪು ಹೊಸ ಮಾರಿಗುಡಿ ದೇಗುಲದ ಆಡಳಿತ ಮೊಕ್ತೆಸರ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲದ ಆಡಳಿತ ಮೊಕ್ತೆಸರರಾದ ಮನೋಹರ್ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಿದರು.
ವೇದಿಕೆಯಲ್ಲಿ ತೋಟಗಾರಿಕೆ ಇಲಾಖೆ ಉಡುಪಿ ಹಿರಿಯ ಸಹಾಯಕ ನಿರ್ದೇಶಕ ಎಲ್ ಹೇಮಂತ್ ಕುಮಾರ್, ಕಾಪು ಹೊಸ ಮಾರಿಗುಡಿ ದೇಗುಲದ ಆಡಳಿತ ಮೊಕ್ತೆಸರ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಿನೇಶ್ ಎ ಸಾಲ್ಯಾನ್,ಬಾಲಗೋಪಾಲ ಬಲ್ಲಾಳ್,ಉಪಸ್ಥಿತರಿದ್ದರು.
ಕಾಪು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು , ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರ್ಚನಾ ಎಂ ಶೆಟ್ಟಿ ವಂದಿಸಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…