ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ದರ ಏರಿಕೆ ಮತ್ತೆ ಮುಂದುವರಿದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು ಸೆಂಚುರಿ ಬಾರಿಸಿದೆ. ಈ ಮೂಲಕ 1 ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ತಲುಪಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, 100 ರೂಪಾಯಿ ಗಡಿದಾಟಿದೆ. ಇಂದು ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು 1 ಲೀಟರ್ ಗೆ 100.23 ರೂ ಆಗಿದೆ. ಡಿಸೇಲ್ ದರ 44 ಪೈಸೆ ಏರಿಕೆ ಕಂಡು ಲೀಟರ್ ಗೆ 93.02 ರೂಪಾಯಿ ತಲುಪಿದೆ.
ನಗರದಲ್ಲಿ ನಿನ್ನೆ ಪೆಟ್ರೋಲ್ ಲೀಟರ್ ಗೆ 99.95 ರೂಪಾಯಿ ಮತ್ತು ಡಿಸೇಲ್ ಲೀಟರ್ ಗೆ 92.38 ರೂಪಾಯಿ ಆಗಿತ್ತು. ಇಂದು ಮತ್ತೆ ಏರಿಕೆಯತ್ತ ಮುಖಮಾಡಿ ಪೆಟ್ರೋಲ್ ಸೆಂಚುರಿ ಬಾರಿಸಿದೆ. ಈ ಮೂಲಕ ಮತ್ತೆ ವಾಹನ ಚಾಲಕರಿಗೆ ಪೆಟ್ರೋಲ್, ಡಿಸೇಲ್ ಬರೆ ಬಿದ್ದಿದೆ.
ಕೆಲ ದಿನಗಳ ಹಿಂದೆ ಹೈದರಾಬಾದ್ ಮತ್ತು ತೆಲಂಗಾಣದಲ್ಲೂ ಪೆಟ್ರೋಲ್ ದರ ಶತಕ ತಲುಪಿತ್ತು. ಭೋಪಾಲ್‍ನಲ್ಲಿ ಲೀಟರ್ ಗೆ 104.53 ರೂಪಾಯಿ ತಲುಪಿತ್ತು. ಇಂದು ಡೆಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 96.93 ರೂಪಾಯಿ. ಡಿಸೇಲ್‍ಗೆ ಲೀಟರ್ ಗೆ 87.69 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ 103.08 ರೂಪಾಯಿ, ಡಿಸೇಲ್ ಲೀಟರ್ ಗೆ 95.14 ರೂಪಾಯಿ ಆಗಿದೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…