ಕೈಕಂಬ, : ಗುರುಪುರ ಮಾಣಿ ಬೆಟ್ಟು ಶ್ರೀಕೋರ್ದಬ್ಬು ಪರಿವಾರ ದೈವಸ್ಥಾನದ ಮೂಲ ಸಾನ್ನಿಧ್ಯವಿದ್ದ ಜಾಗದಲ್ಲಿ ಸುಮಾರು 350 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಬುಧವಾರ ಪತ್ತೆಯಾಗಿವೆ.
ಆ ಪ್ರದೇಶದ ಜನರಿಗೆ ಸಮಸ್ಯೆಗಳು ಎದುರಾಗುತ್ತಿದ್ದು ಇದರಿಂದ ಬುಧವಾರ ಮಾಣಿಬೆಟ್ಟು ಗುತ್ತು, ಕಾರಮೊಗೆರು ಗುತ್ತು, ಬರ್ಕೆ ಹಾಗೂ ಊರಿನವರು ಒಟ್ಟು ಸೇರಿ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ಆರಂಭಿಸಿದ್ದರು. ಈ ಸಂದರ್ಭ ಸುಮಾರು 350 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ. ಇತ್ತೀಚೆಗೆ ದೈವಸ್ಥಾನದಲ್ಲಿ ಇಡಲಾಗಿದ್ದ ತಾಂಬೂಲ ಪ್ರಶ್ನೆಯ ವೇಳೆ ಶಶಿಕುಮಾರ್ ಪಂಡಿತ್ ಅವರು ದೈವಸ್ಥಾನವಿದ್ದ ಪ್ರದೇಶದಲ್ಲಿ ದೈವದ ಪರಿಕರಗಳು ಇರುವ ಬಗ್ಗೆ ಹೇಳಿದ್ದರು.
ಉತ್ಖನನದ ವೇಳೆ ಸುಮಾರು300 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ (ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…