ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳನ್ನು ಆರಂಭಿಸಿದ ಏರ್ ಇಂಡಿಯಾ – vishwanews24

Featured, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳನ್ನು ಆರಂಭಿಸಿದ ಏರ್ ಇಂಡಿಯಾ

ಮಂಗಳೂರು : ಏರ್ ಇಂಡಿಯಾ ಸಂಸ್ಥೆಯು ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳ ಸೇವೆಯನ್ನು ಆರಂಭಿಸಿದೆ. ನವೆಂಬರ್ 15 ರ ಬುಧವಾರದಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿಯು ಈ ಎರಡು ನಗರಗಳಿಗೆ ಮಾತ್ರವಲ್ಲದೆ ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೆ ಸಂಪರ್ಕ ಕಲ್ಪಿಸುತ್ತದೆ.

ಈ ಬಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (MIA) ಮಂಗಳವಾರ ವರದಿ ಬಿಡುಗಡೆ ಮಾಡಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ವಿಮಾನದ ಸಮಯವನ್ನು ಗ್ರಾಹಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಎಂಐಎ ಅಧಿಕಾರಿಗಳು ತಿಳಿಸಿದ್ದಾರೆ.

ಪಡುಬಿದ್ರಿ: ಮಾನಸಿಕ ಖಿನ್ನತೆ- ಯುವಕ ನೇಣು ಬಿಗಿದು ಆತ್ಮಹತ್ಯೆ  – vishwanews24

ವಿಮಾನಗಳ ವೇಳಾಪಟ್ಟಿ

IX 782 ವಿಮಾನವು ವಾರಣಾಸಿಯಿಂದ ಬೆಳಿಗ್ಗೆ 8 ಗಂಟೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ, ಬೆಳಿಗ್ಗೆ 10.30 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಳಿಯುತ್ತದೆ. ವಿಮಾನವನ್ನು ಬದಲಾಯಿಸದೆ 55 ನಿಮಿಷಗಳ ವಿರಾಮದ ನಂತರ, ಅದು KIA ನಿಂದ 11.10 ಕ್ಕೆ ನಿರ್ಗಮಿಸಿ ಮಧ್ಯಾಹ್ನ 12.10 ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.

ವಾರಣಾಸಿ-ಮಂಗಳೂರು ವಿಮಾನ ಸೇವೆಯಿ ನವೆಂಬರ್ 25 ರವರೆಗೆ (ಕೇವಲ 10 ದಿನಗಳವರೆಗೆ) ಮಾತ್ರ ಇರಲಿದೆ. ಆದಾಗ್ಯೂ, ನವೆಂಬರ್ 26 ರಿಂದ, ವಿಮಾನವು ಬೆಂಗಳೂರಿನ ಮೂಲಕ ಚೆನ್ನೈನಿಂದ ಮಂಗಳೂರಿಗೆ ಸೇವೆ ನೀಡಲಿದೆ.

ಪಡುಬಿದ್ರಿ: ಮಾನಸಿಕ ಖಿನ್ನತೆ- ಯುವಕ ನೇಣು ಬಿಗಿದು ಆತ್ಮಹತ್ಯೆ  – vishwanews24

Leave a Reply