ಬೆಂಗಳೂರು : ಇಂದಿನಿಂದ ಮೆಟ್ರೋ ಪ್ರಯಾಣ ಆರಂಭ -Vishwanews24
ಬೆಂಗಳೂರು : ಇಂದಿನಿಂದ ಮೆಟ್ರೋ ಪ್ರಯಾಣ ಆರಂಭ -Vishwanews24
ಬೆಂಗಳೂರು: ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ಆಫೀಸ್ ಕೆಲಸಗಳಿಗೆ ತೆರಳಲು ಮೆಟ್ರೋ ರೈಲನ್ನೇ ಅವಲಂಬಿಸಿರುವ ಜನರಿಗೆ ಇದು ಒಳ್ಳೆಯ ಸುದ್ದಿ. ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ದಿನವಿಡೀ ನಮ್ಮ ಮೆಟ್ರೋ ಸಂಚಾರ ಮಾಡಲಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮೆಟ್ರೋ ಹಳಿಯಲ್ಲಿ ಓಡಾಡಲಿದೆ. ಜನದಟ್ಟಣೆ ಇರುವೆಡೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚರಿಸಿದರೆ ಜನದಟ್ಟಣೆ ಇಲ್ಲದೆಡೆ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ.
