ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಪುಲಿಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೆ.11 ರಂದು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮತ್ತು ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಟ್ಯಾನರಿ ರಸ್ತೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸುಗಮ ಸಂಚಾರಕ್ಕಾಗಿ ಮಧ್ಯಾಹ್ನ 12.30ರಿಂದ ರಾತ್ರಿ 1 ರವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಾರ ನಿರ್ಬಂಧ:
* ನಾಗವಾರ ಮುಖ್ಯರಸ್ತೆ, ಟ್ಯಾನರಿ ರಸ್ತೆ, ಡೇವಿಸ್ ರೋಡ್ ಮುಖ್ಯರಸ್ತೆ
* ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಹೋಗುವ ಮಾರ್ಗ
* ರೋಜರ್ಸ್ ರಸ್ತೆ, ಆಮ್‌ರ್‍ಸ್ಟ್ರಾಂಗ್ ರಸ್ತೆ ಹಾಗೂ ಹಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಮಾರ್ಗ
* ಮಾಸ್ಕ್ ಜಂಕ್ಷನ್‌ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ
* ಲಾಜರ್ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಿಂದ ಸಿಂಧಿ ಕಾಲೊನಿ ಜಂಕ್ಷನ್, ಬುದ್ಧ ವಿಹಾರ ರಸ್ತೆ
* ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ದ್ವಿಮುಖ ಸಂಚಾರ ಬದಲಾವಣೆ
* ಸಿಂಧಿ ಕಾಲೊನ ಜಂಕ್ಷನ್ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ
ಪರ್ಯಾಯ ಮಾರ್ಗ
>> ಥಣಿಸಂದ್ರ ಮುಖ್ಯ ರಸ್ತೆಯಿಂದ ಪುಲಿಕೇಶಿನಗರ, ಶಿವಾಜಿನಗರದ ಕಡೆಗೆ : ಥಣಿಸಂದ್ರ ಮುಖ್ಯರಸ್ತೆ, ನಾಗವಾರ ಜಂಕ್ಷನ್ ಎಡ ತಿರುವು, ಹೆಣ್ಣೂರು ಜಂಕ್ಷನ್ ಬಲ ತಿರುವು, ಎಚ್‌ಬಿಆರ್ 80 ಅಡಿ ರಸ್ತೆ, ಸಿದ್ದಪ್ಪರೆಡ್ಡಿ ಜಂಕ್ಷನ್, ಅಯೋಧ್ಯ ಜಂಕ್ಷನ್, ಲಿಂಗರಾಜಪುರ ಫ್ಲೆತ್ರೖಓವರ್‌ನಿಂದ ಎಚ್.ಎಂ.ರೋಡ್, ಡೇವಿಸ್ ರೋಡ್, ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ ಸಂಚರಿಸಬಹುದು.
>> ಟ್ಯಾನರಿ ಮುಖ್ಯ ರಸ್ತೆಯಿಂದ ಥಣಿಸಂದ್ರ ಕಡೆಗೆ: ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣೆ, ಡೇವಿಸ್ ರೋಡ್, ಎಚ್.ಎಂ.ರೋಡ್ ಜಂಕ್ಷನ್, ಲಿಂಗರಾಜಪುರ ಫ್ಲೆತ್ರೖಓವರ್, ಅಯೋಧ್ಯ ಜಂಕ್ಷನ್, ಸಿದ್ದಪ್ಪ ರೆಡ್ಡಿ ಜಂಕ್ಷನ್, ಹೆಣ್ಣೂರು ಜಂಕ್ಷನ್‌ಎಡ ತಿರುವು, ಹೊರ ವರ್ತುಲ ರಸ್ತೆ, ನಾಗವಾರ ಜಂಕ್ಷನ್ ಬಲ ತಿರುವು, ಥಣಿಸಂದ್ರ ಕಡೆಗೆ ತೆರಳಬಹುದು.
>> ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ : ನೇತಾಜಿ ಜಂಕ್ಷನ್‌ನಲ್ಲಿಬಲ ತಿರುವು ಪಡೆದು ಎಂ.ಎಂ.ರಸ್ತೆ, ಮಾಸ್ಕ್ ಜಂಕ್ಷನ್‌ನಲ್ಲಿಎಡ ತಿರುವು, ಕ್ಲಾರೆನ್ಸ್ ಬ್ರಿಡ್ಜ್ ಬಲ ತಿರುವು, ಪಾಟರಿ ರಸ್ತೆ, ಎಚ್.ಎಂ.ರಸ್ತೆ ಮೂಲಕ ಲಿಂಗರಾಜಪುರ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.
> ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ: ಲಾಜರ್ ರಸ್ತೆಯಲ್ಲಿ ಸಂಚರಿಸಿ ರೈಲ್ವೆ ಕೆಳ ಸೇತುವೆ ಮುಖಾಂತರ ಎಂ.ಎಂ.ರಸ್ತೆ ತಲುಪಿ ಪುಲಿಕೇಶಿನಗರ ಕಡೆಗೆ ಹೋಗಬಹುದು.
>> ರೋಜರ್ಸ್ ರಸ್ತೆ, ಆಮ್‌ರ್‍ಸ್ಟ್ರಾಂಗ್ ರಸ್ತೆ ಹಾಗೂ ಹಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ- ವಿವಿಯಾನಿ ರಸ್ತೆ ಮುಖಾಂತರ ಪಾಟರಿ ರಸ್ತೆ ತಲುಪಿ ಲಾಜರ್ ರಸ್ತೆ ರೈಲ್ವೆ ಅಂಡರ್ ಬ್ರಿಡ್ಜ್ ಮೂಲಕ ಎಂ.ಎಂ.ರಸೆ ್ತತಲುಪಿ ಪುಲಿಕೇಶಿನಗರ ಕಡೆಗೆ ಹೋಗಬಹುದು.
>> ಮಾಸ್ಕ್ ಜಂಕ್ಷನ್‌ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ: ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ.ರಸ್ತೆ, ಲಾಜರ್ ರಸ್ತೆ, ರೈಲ್ವೆ ಕೆಳಸೇತುವೆ, ಪಾಟರಿ ರಸ್ತೆ, ಎಚ್.ಎಂ.ರಸ್ತೆ ಮೂಲಕ ಲಿಂಗರಾಜಪುರ ಹಾಗೂ ಹೆಣ್ಣೂರು ಕಡೆಗೆ ಹೋಗಬಹುದು.
>> ಲಾಜರ್ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್ ಸಿಂಧಿ ಕಾಲೊನಿ ಜಂಕ್ಷನ್ ಕಡೆಗೆ: ಎಂ.ಎಂ.ರಸ್ತೆ ಮೂಲಕ ಮಾಸ್ಕ್ ಜಂಕ್ಷನ್ ಎಡ ತಿರುವು, ಕೋಲ್ಸ್ ರಸ್ತೆ, ವೀಲ್ಹರ್ಸ್ ರಸ್ತೆ, ಸಿಂಧಿ ಕಾಲೊನಿ ಜಂಕ್ಷನ್.
> ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ: ವೀಲ್ಹರ್ಸ್ ರಸ್ತೆ, ಥಾಮಸ್ ಕೆಫೆ ಜಂಕ್ಷನ್ ಎಡ ತಿರುವು, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ವಾರ್ ಮೆಮೋರಿಯಲ್ ಜಂಕ್ಷನ್.
ಪಾರ್ಕಿಂಗ್ ನಿರ್ಬಂಧ
ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್, ಗೋವಿಂದಪುರ ಪೊಲೀಸ್ ಠಾಣೆವರೆಗೆ, ಎಚ್‌ಬಿಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್‌ವರೆಗೆ, ಎಂ.ಎಂ.ರಸ್ತೆ, ಪಾಟರಿ ರಸ್ತೆ, ಲಾಜರ್ ರಸ್ತೆ, ಬುದ್ಧ ವಿಹಾರ ರಸ್ತೆ, ಅಸ್ಸಾಯೇ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ.
ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ : ಹೆಚ್‌ಡಿಡಿ ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ …
ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ ತಿರುವನಂತಪುರಂ: ಕೇರಳ ಸರ್ಕಾರ ಮಹತ್ವದ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ…
ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ ಬೆಂಗಳೂರು:…
ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ…
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ…