ಬೆಂಗಳೂರು: ಬ್ರಿಟನ್ ನಿಂದ ನಗರಕ್ಕೆ ಹಿಂದಿರುಗಿದ್ದಂತ ತಾಯಿ, ಮಗಳು ಹಾಗೂ ಮತ್ತೋರ್ವ ವ್ಯಕ್ತಿ ಸೇರಿದಂತೆ ಮೂವರಿಗೆ ಯುಕೆ ಕೊರೋನಾ ರೂಪಾಂತರ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಾಯಿ, ಮಗಳು ವಾಸವಿರುವಂತ ಅಪಾರ್ಟ್ಮೆಂಟ್ ಅನ್ನು 28 ದಿನಗಳ ಕಾಲ ಸೀಲ್ ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಇಂದು ಐಸಿಎಂಆರ್ ಬ್ರಿಟನ್ ರೂಪಾಂತರ ವೈರಸ್ ಬೆಂಗಳೂರಿನ ಮೂವರಿಗೆ ತಗುಲಿರುವುದು ದೃಢಪಟ್ಟ ಹಿನ್ನಲೆಯಲ್ಲಿ, ತಾಯಿ, ಮಗಳು ವಾಸವಿರುವಂತ ವಸಂತಪುರದ ಅಪಾರ್ಟ್ಮೆಂಟ್ ಗೆ ತೆರಳಿ ಅಪಾರ್ಟ್ಮೆಂಟ್ ನಲ್ಲಿರುವಂತ ನಿವಾಸಿಗಳ ಮನವೊಲಿಸುವಂತ ಪ್ರಯತ್ನಕ್ಕೆ ಇಳಿದಿದ್ದಾರೆ. ತಾಯಿ, ಮಗಳು ಸಂಪರ್ಕಿತರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಿದೆ.
ಇನ್ನೂ ವಸಂತ ಪುರದ ತಾಯಿ ಮಗಳು ವಾಸವಿರುವಂತ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಮನವಿ ಮಾಡಿರುವಂತ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು, 28 ದಿನಗಳ ಕಾಲ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲು ನಿರ್ಧರಿಸಿದೆ.
ಈ ಅಪರ್ಟ್ಮೆಂಟ್ ನಿವಾಸಿಗಳನ್ನ ಹೋಟೆಲ್ʼನಲ್ಲಿ ಕ್ವಾರೆಂಟೈನ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬುಲೆನ್ಸ್ ಸಮೇತ ಆಗಮಿಸಿದ್ದರು. ಆದ್ರೆ, ಇದಕ್ಕೊಪ್ಪದ ಸ್ಥಳೀಯರು, ತಮ್ಮನ್ನ ನಾವು ನಮ್ಮ ಮನೆಯಲ್ಲಿಯೇ ಕ್ವಾರೆಂಟೈನ್ ಆಗ್ತೇವೆ. ಬೇಕಿದ್ರೆ, ಇಡೀ ಅಪರ್ಟಮೇಂಟ್ ಸೀಲ್ ಡೌನ್ ಮಾಡಿ ಎಂದು ಒತ್ತಾಯ ಮಾಡಿದ್ರು. ನಿವಾಸಿಗಳ ಒತ್ತಾಯಕ್ಕೆ ಮಣಿದ ಬಿಬಿಎಂಪಿ ಅಧಿಕಾರಿಗಳು ಅಪರ್ಟ್ಮೆಂಟ್ ಸೀಲ್ ಮಾಡಲು ನಿರ್ಧಾರಿಸಿದೆ.
ದು 25 ಫ್ಲಾಟ್ಗಳಿರುವ ಅಪಾರ್ಟ್ಮೆಂಟ್ ಆಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಬಹುತೇಕರು ಐಟಿ-ಬಿಟಿ ಉದ್ಯೋಗಿಗಳು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇಬ್ಬರು, ದ್ವಿತೀಯ ಸಂಪರ್ಕದಲ್ಲಿ 35 ಮಂದಿ ಇರುವುದು ಗೊತ್ತಾಗಿದೆ. ಸುಮಾರು 40 ಮಂದಿಯನ್ನು ಅಪಾರ್ಟ್ಮೆಂಟ್ನಿಂದ ಶಿಫ್ಟ್ ಮಾಡಿ, ಸಾಂಸ್ಥಿಕ ಕ್ವಾರಂಟೈನ್ ಮಾಡುವ ಉದ್ದೇಶದಿಂದ ಇಲ್ಲಿಗೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿದ್ದರು. ಆದರೆ ನಿವಾಸಿಗಳು ಮಾತ್ರ ಯಾವುದೇ ಒತ್ತಾಯಕ್ಕೂ ಜಗ್ಗಲಿಲ್ಲ.
ನೀವು ಬೇಕಿದ್ದರೆ ಅಪಾರ್ಟ್ಮೆಂಟ್ನ್ನು ಸೀಲ್ಡೌನ್ ಮಾಡಿ.. ನಾವು ಇಲ್ಲೇ ಇರುತ್ತೇವೆ. ನೀವು ಹೋಟೆಲ್ಗಳಿಗೆ ಕರೆದುಕೊಂಡು ಹೋಗುತ್ತೀರಿ.. ಆದರೆ ಅಲ್ಲಿನ ಪರಿಸ್ಥಿತಿ ಏನು ಎಂಬುದು ನಮಗೆ ಗೊತ್ತು. ಹಿಂದೆಲ್ಲ ಕ್ವಾರಂಟೈನ್ ಆಗಿದ್ದವರ ಪರಿಸ್ಥಿತಿ ಹೇಗಿತ್ತು ಎಂಬುದೂ ನಮಗೆ ಗೊತ್ತು. ನೀವು ಕನಿಷ್ಠ ಸೌಲಭ್ಯವನ್ನೂ ನಮಗೆ ಕೊಡೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ನಮಗೆ ಚಿಕ್ಕಮಕ್ಕಳಿದ್ದಾರೆ. ಅವರನ್ನೆಲ್ಲ ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಹೊಸ ನಿಯಮದಂತೆ ಕ್ವಾರಂಟೈನ್ ಮಾಡಬೇಕು ಎಂದು ಆರೋಗ್ಯ ಸಿಬ್ಬಂದಿ ಎಷ್ಟೇ ಹೇಳಿದರೂ ಅಪಾರ್ಟ್ಮೆಂಟ್ ನಿವಾಸಿಗಳು ಮಾತ್ರ ಅಪಾರ್ಟ್ಮೆಂಟ್ ಬಿಟ್ಟು ಕದಲುತ್ತಿಲ್ಲ.
ಸೀಲ್ಡೌನ್ಗೆ ನಿರ್ಧಾರ
ಕೊನೆಗೂ ಆರೋಗ್ಯ ಸಿಬ್ಬಂದಿಯೇ ಸೋಲಬೇಕಾಯಿತು. ಇಡೀ ಅಪಾರ್ಟ್ಮೆಂಟ್ನ್ನು ಸೀಲ್ಡೌನ್ ಮಾಡಿ, ನಿವಾಸಿಗಳು ಅಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. 14 ದಿನಗಳವರೆಗೆ ವಸಂತನಗರದ ಅಪಾರ್ಟ್ಮೆಂಟ್ ಸೀಲ್ಡೌನ್ ಆಗಲಿದ್ದು, ಅದನ್ನು ಮತ್ತೂ 14 ದಿನಗಳ ಕಾಲ ವಿಸ್ತರಿಸುವ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಪಾರ್ಟ್ಮೆಂಟ್ ಗೇಟ್ಗೆ ಬೀಗ ಹಾಕಲಾಗಿದ್ದು, ‘ನಾವೀಗ ಗೃಹ ಬಂಧನದಲ್ಲಿ ಇದ್ದೇವೆ..’ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ಅಪಾರ್ಟ್ಮೆಂಟ್ ಸಂಪರ್ಕಿಸುವ ರಸ್ತೆಯನ್ನೂ ಸಹ ಕ್ಲೋಸ್ ಮಾಡಲಾಗಿದೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…