Featured

ಉಡುಪಿ: ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ರಾಜೇಶ್ ಕೇಶವ ಆಚಾರ್ಯ ಯುಎಎಇ ಯಿಂದ ಭಾರತಕ್ಕೆ ಗಡಿಪಾರು -vishwanews24

ಉಡುಪಿ: ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ರಾಜೇಶ್ ಕೇಶವ ಆಚಾರ್ಯ ಯುಎಎಇ ಯಿಂದ ಭಾರತಕ್ಕೆ ಗಡಿಪಾರು

ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಉಡುಪಿ ಪೊಲೀಸ್

ಉಡುಪಿ : ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಗೃಹ ಸಚಿವಾಲಯ (ಎಂಹೆಚ್‌ಎ) ಮತ್ತು ಕರ್ನಾಟಕ ಪೊಲೀಸರ ಸಮನ್ವಯದೊಂದಿಗೆ ಕೇಂದ್ರ ತನಿಖಾ ದಳ (ಸಿಬಿಐ) ಕಾರ್ಯಾಚರಣೆ ನಡೆಸಿ, ಮೋಸ್ಟ್ ವಾಂಟೆಡ್ ಆರೋಪಿ ರಾಜೇಶ್ ಕೇಶವ ಆಚಾರ್ಯನನ್ನು ಶುಕ್ರವಾರ (ನವೆಂಬರ್ 27) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಎಇ) ನಿಂದ ಭಾರತಕ್ಕೆ ಗಡಿಪಾರು ಮಾಡಿಸುವಲ್ಲಿ ಯಶಸ್ವಿಯಾಗಿದೆ.

ಭೂಗತ ಪಾತಕಿ ಕಲಿ ಯೋಗೀಶ್ ಸಹಚರನಾಗಿ ಗುರುತಿಸಿಕೊಂಡಿರುವ ಆಚಾರ್ಯ, 2002ರಲ್ಲಿ ನಡೆದ ಮನೋಹರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಅಪರಾಧ ಸಂಖ್ಯೆ 251/2002 ರಂತೆ ದಾಖಲಾಗಿರುವ ಈ ಪ್ರಕರಣದಲ್ಲಿ, ಕೊಲೆಗೆ ಪ್ರಚೋದನೆ ನೀಡಿದ ಆರೋಪ ಈತನ ಮೇಲಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾಹಿತಿಯಂತೆ, ಆಚಾರ್ಯನನ್ನು ಭಾರತಕ್ಕೆ ಕರೆತರುವ ಪ್ರಯತ್ನದ ಭಾಗವಾಗಿ 2026ರ ಮೇ ತಿಂಗಳಲ್ಲಿ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು ಮತ್ತು ಸುಮಾರು ಮೂರು ತಿಂಗಳ ಹಿಂದೆ ಪಾಸ್‌ಪೋರ್ಟ್ ರದ್ದುಪಡಿಸಲಾಗಿತ್ತು.

2002ರ ಜುಲೈನಲ್ಲಿ ಮನೋಹರ್ ಶೆಟ್ಟಿ ಹತ್ಯೆಗೆ ಆಚಾರ್ಯ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದ ಎಂದು ಸಿಬಿಐ ತಿಳಿಸಿದೆ. 2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಆಚಾರ್ಯ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಕರ್ನಾಟಕ ಪೊಲೀಸರ ಮನವಿಯ ಮೇರೆಗೆ ನವದೆಹಲಿಯ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ (ಎನ್‌ಸಿಬಿ) ಈತನ ವಿರುದ್ಧ ರೆಡ್ ನೋಟಿಸ್ ಪ್ರಕಟಿಸಲು ನೆರವಾಗಿತ್ತು. ಬಳಿಕ ಯುಎಇ ಅಧಿಕಾರಿಗಳು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಗಡಿಪಾರು ಮಾಡಿದ್ದಾರೆ.

ನವೆಂಬರ್ 27ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಚಾರ್ಯನನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಚಾರ್ಯನನ್ನು ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲಾ ಪೊಲೀಸರ ಜಂಟಿ ತಂಡ ಮುಂಬೈಗೆ ತೆರಳಿದೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಇಂಟರ್‌ಪೋಲ್‌ಗಾಗಿ ಭಾರತದ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಆಗಿ ಕಾರ್ಯನಿರ್ವಹಿಸುವ ಸಿಬಿಐ, ‘ಭಾರತ್‌ಪೋಲ್’ ಮೂಲಕ ದೇಶದಾದ್ಯಂತ ಇರುವ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಅಂತರರಾಷ್ಟ್ರೀಯ ಪೊಲೀಸ್ ಸಹಕಾರವನ್ನು ಸಂಯೋಜಿಸುತ್ತದೆ. 2019ರಿಂದ ಈವರೆಗೆ, 2026ರಲ್ಲಿ ಕರೆತರಲಾದ 77 ಪರಾರಿ ಆರೋಪಿಗಳು ಸೇರಿದಂತೆ ೩೦೦ಕ್ಕೂ ಹೆಚ್ಚು ಬೇಕಾಗಿದ್ದ ಅಪರಾಧಿಗಳನ್ನು ಇಂಟರ್‌ಪೋಲ್ ಮೂಲಕ ಭಾರತಕ್ಕೆ ವಾಪಸ್ ಕರೆತರಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂ ಕೋರ್ಟ್‌ನಿಂದ ಐವರ ಜಾಮೀನು ರದ್ದು ಅರ್ಜಿ ವಜಾ -vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂ ಕೋರ್ಟ್‌ನಿಂದ ಐವರ ಜಾಮೀನು ರದ್ದು ಅರ್ಜಿ ವಜಾ ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ…

20 hours ago

ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ತುಳುವಿಗೆ ಅಧಿಕೃತ ಸ್ಥಾನ -vishwanews24

ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ತುಳುವಿಗೆ ಅಧಿಕೃತ ಸ್ಥಾನ ಸಾರ್ವಜನಿಕರು ಇನ್ನು ಮುಂದೆ ತುಳು ಭಾಷೆಯಲ್ಲೇ…

21 hours ago

ಮಂಗಳೂರು: ನ.30 ರಂದು ಸಂತ ಅಲೋಶಿಯಸ್ ವಿವಿಯಲ್ಲಿ ಬೃಹತ್ ಉದ್ಯೋಗ ಮೇಳ -vishwanews24

 ಮಂಗಳೂರು: ನ.30 ರಂದು ಸಂತ ಅಲೋಶಿಯಸ್ ವಿವಿಯಲ್ಲಿ ಬೃಹತ್ ಉದ್ಯೋಗ ಮೇಳ ಈಗಾಗಲೇ 10,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳ ನೋಂದಣಿ ಮಂಗಳೂರು:…

21 hours ago

ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ -vishwanews24

ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…

23 hours ago

ಬೆಂಗಳೂರು – ಮಡಗಾಂವ್ ವಂದೇಭಾರತ್ ರೈಲಿನ ವೇಗ ಹೆಚ್ಚಿಸಲು ಸಂಸದ ಕೋಟ ಮನವಿ -vishwanews24

ಬೆಂಗಳೂರು - ಮಡಗಾಂವ್ ವಂದೇಭಾರತ್ ರೈಲಿನ ವೇಗ ಹೆಚ್ಚಿಸಲು ಸಂಸದ ಕೋಟ ಮನವಿ ಉಡುಪಿ : ನೂತನವಾಗಿ ಆರಂಭಗೊಂಡ ಬೆಂಗಳೂರು-…

23 hours ago

ಆಶಾ ಕಾರ್ಯಕರ್ತೆಯರ ಸೇವೆಯನ್ನು ಆರೋಗ್ಯ ಸಚಿವರು ಅವಮಾನಿಸುತ್ತಿರುವುದು ಖಂಡನೀಯ : ಯಶ್ ಪಾಲ್ ಸುವರ್ಣ ಆಕ್ರೋಶ – vishwanews24

ಆಶಾ ಕಾರ್ಯಕರ್ತೆಯರ ಸೇವೆಯನ್ನು ಆರೋಗ್ಯ ಸಚಿವರು ಅವಮಾನಿಸುತ್ತಿರುವುದು ಖಂಡನೀಯ.. ಆಶಾ ಕಾರ್ಯಕರ್ತರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಖಾದರ್…

1 day ago