ಬೆಂಗಳೂರು : ಮೂರವರಲ್ಲಿ ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ..!! Vishwanews24
ಬೆಂಗಳೂರಿನಲ್ಲಿ ಬ್ರಿಟನ್ ವೈರಸ್ ಪತ್ತೆ ..!! Vishwanews24
ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
— Dr Sudhakar K (@mla_sudhakar) December 29, 2020
ಬೆಂಗಳೂರು: ಹೊಸ ರೂಪಾಂತರಿತ ಕೋವಿಡ್ ಸೋಂಕಿನ ಆತಂಕ ಹೆಚ್ಚುತ್ತಿರುವ ಸಮಯದಲ್ಲೇ ಭಾರತಕ್ಕೆ ಆಗಮಿಸಿರುವ ಆರು ಜನರಲ್ಲಿ ಬ್ರಿಟನ್ ರೂಪಾಂತರಿತ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಅದರಲ್ಲೂ ಬೆಂಗಳೂರಿಗೆ ಆಗಮಿಸಿರುವ ಮೂವರಲ್ಲಿ ಈ ಕೋವಿಡ್ ಸೋಂಕು ಕಾಣಿಸಿಕಂಡಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ನಿಮ್ಹಾನ್ಸ್ ನಲ್ಲಿ ನಡೆದ ವಂಶವಾಹಿನಿ ಪರೀಕ್ಷೆಯಿಂದ ಮೂವರಿಗೆ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿರುವುದು. ಈ ಮೂವರು ಪ್ರಯಾಣಿಕರನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಭಾರತದಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿರುವುದು ಇದೇ ಮೊದಲು.ಆರು ಸೋಂಕಿತರ ಪೈಕಿ ಬೆಂಗಳೂರಿನಲ್ಲೇ ಮೂವರಿದ್ದಾರೆ. ಎರಡು ಪ್ರಕರಣಗಳು ಹೈದರಾಬಾದ್ನಲ್ಲಿ, ಒಂದು ಪ್ರಕರಣ ಪುಣೆಯಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಈ ವೈರಸ್ ಈಗಿನ ಕೊರೊನಾ ವೈರಸ್ಗಿಂತಲೂ ಶೇಕಡಾ 70ರಷ್ಟು ಹೆಚ್ಚು ಸಾಂಕ್ರಾಮಿಕಗೊಳ್ಳುವ ಶಕ್ತಿ ಹೊಂದಿದೆ ಎಂದು ಹೇಳಲಾಗಿದೆ. ಸದ್ಯ ಇದು ಬ್ರಿಟನ್ನಲ್ಲಿ ವ್ಯಾಪಕಗೊಂಡಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ..
