Featured

ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ – vishwanews24

ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ ; ಮೆಟ್ರೊದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಯಾಣ

ರಾಜ್ಯಪಾಲರಾದ ಸುಧಾ ಯಾದವ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಸ್.ಜಿ. ಪಾಳ್ಯ (ಸುಧ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ನ ಎತ್ತರಿಸಿದ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು.

ನಮ್ಮ ಮೆಟ್ರೋದ ಎರಡನೇ ಹಂತದ ಯೋಜನೆಯ ಭಾಗವಾಗಿರುವ ಪಿಂಕ್ ಲೈನ್, ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರವನ್ನು ಉತ್ತರ ಬೆಂಗಳೂರಿನ ನಾಗವಾರದೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ. 21.25 ಕಿ.ಮೀ ಉದ್ದದ ಈ ಮಾರ್ಗದಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 13.76 ಕಿ.ಮೀ ಭೂಗತ ಮಾರ್ಗವಿದೆ.

ವಿವರವಾದ ಯೋಜನಾ ವರದಿ (ಡಿಪಿಆರ್) ಪ್ರಕಾರ, ಸಂಪೂರ್ಣ ಕಾರ್ಯಾರಂಭಗೊಂಡ ಬಳಿಕ ಈ ಮಾರ್ಗದಲ್ಲಿ ಪ್ರತಿದಿನ ಸುಮಾರು 3.76 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ.

ಮೆಟ್ರೊದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಯಾಣ

ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನಂತರ ರಾಜ್ಯಪಾಲರಾದ ಡಾ ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮೆಟ್ರೋದಲ್ಲಿ ಬಿಳೇಕಹಳ್ಳಿ-ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸಿದರು.

ಪ್ಲಾಟ್‌ಫಾರ್ಮ್‌ಗೆ ತೆರಳುವ ಮುನ್ನ ಮೋದಿ ಅವರು ಮೆಟ್ರೋ ಟಿಕೆಟ್ ಖರೀದಿಸಿದರು. ರೈಲು ಹತ್ತುವ ಮೊದಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಯೋಜನೆಯ ಕುರಿತು ಅವರಿಗೆ ಮಾಹಿತಿ ನೀಡಿದರು.

Vishwa News 24

Recent Posts

ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ – vishwanews24

ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ ಮಣಿಪಾಲ: ವೇಶ್ಯಾವಾಟಿಕೆ ನಡೆಸಲು ಪಶ್ಚಿಮ ಬಂಗಾಳದಿಂದ ಮಹಿಳೆಯರನ್ನು…

1 hour ago

ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ  ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ : Vishwanews24

ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ  ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ  ಮಂಗಳೂರು: ಕೊಂಚಾಡಿ ದೇರೆಬೈಲ್‌ನ ಶ್ರೀ ಕ್ಷೇತ್ರ ಮಂದಾರಬೈಲು…

1 hour ago

ಕಾರವಾರ: ಚಮನ್ ಮೀನು ವಿಷಕಾರಿ ಅನಿಲ ದುರಂತಕ್ಕೆ ಐವರು ಮೀನುಗಾರರು ಬಲಿ;  ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ – vishwanews24

ಕಾರವಾರ: ಚಮನ್ ಮೀನು ವಿಷಕಾರಿ ಅನಿಲ ದುರಂತಕ್ಕೆ ಐವರು ಮೀನುಗಾರರು ಬಲಿ;  ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕಾರವಾರ : ಉತ್ತರ…

2 hours ago

ಮಂಗಳೂರು: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ : ಸಚಿವ ಅಶ್ವಿನಿ ವೈಷ್ಣವ್ – vishwanews24

ಮಂಗಳೂರು: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ : ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು: ಕೊಂಕಣ ರೈಲ್ವೆ…

2 hours ago

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ. ಖಾದರ್ – vishwanews24

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ.ಖಾದರ್ ಬೆಂಗಳೂರು : ಹೋಟೆಲ್, ರೆಸ್ಟೋರೆಂಟ್…

2 hours ago

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ​​ಬಳಿ ಮಾನವನ ತಲೆಬುರುಡೆ ಪತ್ತೆ! vishwanews24

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ​​ಬಳಿ ಮಾನವನ ತಲೆಬುರುಡೆ ಪತ್ತೆ! ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ…

2 hours ago