Featured

ಬೆಂಗಳೂರು: ರೀಲ್ಸ್ ವಿಚಾರಕ್ಕೆ ಗಲಾಟೆ; ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ – vishwanews24

ಬೆಂಗಳೂರು: ರೀಲ್ಸ್ ವಿಚಾರಕ್ಕೆ ಗಲಾಟೆ; ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

ಬೆಂಗಳೂರು: ರೀಲ್ಸ್‌ ನೋಡುತ್ತಿದ್ದ ವಿಚಾರಕ್ಕೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೆಚ್‌ಎಎಲ್‌ ವಿಭೂತಿಪುರದಲ್ಲಿ ನಡೆದಿದೆ.

ರಾಘವೇಂದ್ರ ಎಂಬಾತ ತನ್ನ ಪತ್ನಿ ಶೃತಿ ಅವರನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ರಾಘವೇಂದ್ರ ಹಾಗೂ ಶೃತಿ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ದಾವಣಗೆರೆಯಲ್ಲಿರುವ ಅಜ್ಜಿ ಮನೆಯಲ್ಲಿ ಇರಿಸಲಾಗಿತ್ತು. ನಿನ್ನೆ ದಂಪತಿ ಇಬ್ಬರೇ ಮನೆಯಲ್ಲಿ ಇದ್ದ ವೇಳೆ ಗಲಾಟೆ ನಡೆದಿದೆ.

ಇದನ್ನೂ ಓದಿ: 

ಗಲಾಟೆ ವಿಕೋಪಕ್ಕೆ ತಿರುಗಿ ರಾಘವೇಂದ್ರ ಬಿಯರ್ ಬಾಟಲ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶೃತಿ ಯಾವಾಗಲೂ ರೀಲ್ಸ್ ನೋಡುತ್ತಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿಯವರೆಗೂ ಶೃತಿ ರೀಲ್ಸ್ ನೋಡುತ್ತಿದ್ದ ವೇಳೆ ಮತ್ತೆ ಗಲಾಟೆ ನಡೆದಿದ್ದು, ಈ ವೇಳೆ ಕೃತ್ಯ ನಡೆದಿದೆ.

ಇದನ್ನೂ ಓದಿ: 

ಘಟನೆ ನಿನ್ನೆ ರಾತ್ರಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಹೆಚ್‌ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ

Vishwa News 24

Recent Posts

ಸತೀಶ್​​ ಜಾರಕಿಹೊಳಿಗೆ ಇಡಿ ದಾಳಿ ರಾಜಕೀಯ ಪ್ರೇರಿತ ; ಅವರು ಯಾವುದೇ ತಪ್ಪು ಮಾಡಿಲ್ಲ : ಸಿಎಂ ಡಿಕೆಶಿ – vishwanews24

ಸತೀಶ್​​ ಜಾರಕಿಹೊಳಿ ಅವರ ಬೆಳವಣಿಗೆ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.. ನಮ್ಮ ಕುಟುಂಬಸ್ಥರು ವಿದೇಶದಲ್ಲಿ ಬಿಸಿನೆಸ್ ಮಾಡುವುದು ತಪ್ಪಾ?.. ಅವರ ಜೊತೆ…

30 minutes ago

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ – vishwanews24

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ ;  ಪ್ರಕರಣಕ್ಕೆ ಮಹತ್ವದ ತಿರುವು ಬೆಂಗಳೂರು: ಬೆಂಗಳೂರಿನ…

46 minutes ago

ಉಡುಪಿ: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯ ; ಸೆಪ್ಟೆಂಬರ್ 30 ಕೊನೆಯ ದಿನ – vishwanews24

ಉಡುಪಿ: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯ ; ಸೆಪ್ಟೆಂಬರ್ 30 ಕೊನೆಯ ದಿನ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ…

1 hour ago

ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ : ದೇವಿಪ್ರಸಾದ್ ಶೆಟ್ಟಿ ಬೆಳಪು – vishwanews24

ಮೈಸೂರು ಕಂಬಳಕ್ಕೆ ಅಧಿಕೃತ ಆಹ್ವಾನ ಬಂದ ಬಳಿಕವಷ್ಟೇ ಅಂತಿಮ ನಿರ್ಧಾರ: ದೇವಿಪ್ರಸಾದ್ ಶೆಟ್ಟಿ ಬೆಳಪು ಮೂಡುಬಿದಿರೆ: ಮೈಸೂರಿನಲ್ಲಿ ಕಂಬಳ ಆಯೋಜಿಸುವ…

2 hours ago

ಬೆಂಗಳೂರು: ಆಹಾರ ಮತ್ತು ದಿನಬಳಕೆ ವಸ್ತುಗಳ ಮಾರಾಟ ಅಂಗಡಿಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ – vishwanews24

ಬೆಂಗಳೂರು: ಆಹಾರ ಮತ್ತು ದಿನಬಳಕೆ ವಸ್ತುಗಳ ಮಾರಾಟ ಅಂಗಡಿಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ ಬೆಂಗಳೂರು: ನಗರದ ವಿವಿಧೆಡೆ ಆಹಾರ…

2 hours ago

ಮುಖ್ಯಮಂತ್ರಿಯಾಗಿ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ: ನಾಳೆ ವಿಧಾನಸೌಧದಲ್ಲಿ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ – vishwanews24

ಸಿಎಂ ಡಿ.ಕೆ. ಶಿವಕುಮಾರ್‌ ಸರ್ಕಾರಕ್ಕೆ 100 ದಿನದ ಸಂಭ್ರಮ.. ನಾಳೆ ವಿಧಾನಸೌಧದಲ್ಲಿ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ…

2 hours ago