ಬೆಂಗಳೂರು:  ಸಹೋದ್ಯೋಗಿ ಯುವತಿಯರ ಖಾಸಗಿ ದೃಶ್ಯ ಸೆರೆಹಿಡಿದು ಲೈಂಗಿಕ ಕಿರುಕುಳ ಆರೋಪ  : ಕುಂದಾಪುರ ಮೂಲದ ಯುವಕ ಬಂಧನ – Vishwanews24

Featured, ಉಡುಪಿ, ರಾಜ್ಯ ನ್ಯೂಸ್

ಬೆಂಗಳೂರು:  ಸಹೋದ್ಯೋಗಿ ಯುವತಿಯರ ಖಾಸಗಿ ದೃಶ್ಯ ಸೆರೆಹಿಡಿದು ಲೈಂಗಿಕ ಕಿರುಕುಳ ಆರೋಪ  : ಕುಂದಾಪುರ ಮೂಲದ ಯುವಕ ಬಂಧನ

ಬೆಂಗಳೂರು: ಸಹೋದ್ಯೋಗಿ ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಕುಂದಾಪುರ ಮೂಲದ ರಘುರಾಮ್‌ ಎಂಬಾತನನ್ನು ಪಶ್ಚಿಮ ಬಂಗಾಲದ 22 ವರ್ಷದ ಯುವತಿ ನೀಡಿದ ದೂರಿನ ಆಧಾರದಲ್ಲಿ ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕ್ಯಾಟರಿಂಗ್‌ ನಡೆಸುತ್ತಿದ್ದ ರಘುರಾಮ್‌ ಪಶ್ಚಿಮ ಬಂಗಾಲದ ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಸಂತ್ರಸ್ತೆ, ಆಕೆಯ ಸ್ನೇಹಿತೆ ಹಾಗೂ ರಘುರಾಮ್‌ ನಿಸರ್ಗ ಗಾರ್ಡನ್‌ನ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಮೇ .12ರಂದು ದೂರುದಾರೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದ ಇದನ್ನು ಆಕೆಯ ಸ್ನೇಹಿತೆ ಗಮನಿಸಿ ಬೊಬ್ಬೆ ಹಾಕಿದ್ದಳು. ಇದನ್ನು ಪ್ರಶ್ನಿಸಿದಾಗ ತಾನು ಹೇಳಿದಂತೆ ಕೇಳಬೇಕು. ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು ಇಲ್ಲವಾದಲ್ಲಿ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಲಾಗಿದೆ.

ಶಿರ್ವ: ರೈಲ್ವೆ ಟಿಕೇಟ್‌ ವಿಚಾರ – ಟ್ರಾವೆಲ್‌ ಏಜನ್ಸಿ ಮಾಲಿಕರ ಮೇಲೆ ಗ್ರಾಹಕರಿಂದ  ಹಲ್ಲೆ : ಪ್ರಕರಣ ದಾಖಲು – Vishwanews24

Leave a Reply