ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ; ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ – vishwanews24

Featured, ರಾಜ್ಯ ನ್ಯೂಸ್

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ  ಬಿಜೆಪಿಗೆ

ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ

ಉಪಮೇಯರ್ ಆಗಿ ವೀಣಾ ಜೋಶಿ ಆಯ್ಕೆ

ಬೆಳಗಾವಿ: ಮಹಾನಗರ ಪಾಲಿಕೆಯ ಮೂರನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್​​ಗೆ ಚುನಾವಣೆ ನಡೆದಿತ್ತು. ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಂತ್ರ ಪ್ರತಿತಂತ್ರ ರೂಪಿಸಿದ್ದವು. ಹೀಗಾಗಿ ತೀವ್ರ ಕುತೂಹಲ ಮೂಡಿಸಿತ್ತು. ಸದ್ಯ ಈ ಕುತೂಹಲಕ್ಕೆ ಬ್ರೇಕ್​ ಬಿದ್ದಿದ್ದು, ಬೆಳಗಾವಿ ಪಾಲಿಕೆ ಬಿಜೆಪಿ ಮಡಿಲಿಗೆ ಸೇರಿದೆ. ಆ ಮೂಲಕ ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ ಆಗಿದ್ದು, ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆ ಆಗಿದ್ದಾರೆ.

3ನೇ ಅವಧಿಗೆ ಮೇಯರ್, ಉಪಮೇಯರ್​ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಆಯ್ಕೆಗೆ ಚುನಾವಣಾಧಿಕಾರಿ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ವಿರುದ್ಧವಾಗಿ 5 ಮತ ಚಲಾವಣೆ ಆಗಿದ್ದರೆ, ವೀಣಾ ಪರವಾಗಿ 40 ಹಾಗೂ ವಿರುದ್ಧವಾಗಿ 19 ಮತಗಳು ಚಲಾವಣೆ ಮಾಡಲಾಗಿದೆ.

ರಾಜ್ಯ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಲಿದೆ :ಯು.ಟಿ.ಖಾದರ್ – vishwanews24

Leave a Reply