ಬೆಳಗಾವಿ : 4 ಮಕ್ಕಳೊಂದಿಗೆ ವಿಷ ಸೇವಿಸಿ ತಂದೆ ಆತ್ಮಹತ್ಯೆ – Vishwanews24

Featured, ರಾಜ್ಯ ನ್ಯೂಸ್

ಬೆಳಗಾವಿ : 4 ಮಕ್ಕಳೊಂದಿಗೆ ವಿಷ ಸೇವಿಸಿ ತಂದೆ ಆತ್ಮಹತ್ಯೆ – Vishwanews24

ಬೆಳಗಾವಿ: ಕೊರೋನಾ ನಂತ್ರ ಬ್ಲ್ಯಾಕ್ ಫಂಗಸ್ ನಿಂದಾಗಿ ಪತ್ರಿ ಸಾವನ್ನಪ್ಪಿದ್ದರಿಂದಾಗಿ, ಮನನೊಂದಂತ ಪತಿ, ತನ್ನ ನಾಲ್ವರು ಮಕ್ಕಳಿಗೆ ವಿಷವಿಕ್ಕಿ ಹತ್ಯೆಗೈದು, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಧಾರುಣ ಘಟನೆ ಚಿಕ್ಕೋಡಿಯ ಬೋರಗಲ್ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿನ ಗೋಪಾಲ್ ಹಾದಿಮನಿ ಪತ್ನಿ ಜಯಾ, ಜುಲೈ 6ರಂದು ಬ್ಲಾಕ್ ಫಂಗಸ್ ನಿಂದಾಗಿ ಸಾವನ್ನಪ್ಪಿದ್ದರು. ಇದರಿಂದ ಮಾನಸಿಕವಾಗಿ ಅವರ ಪತಿ ಗೋಪಾಲ ಹಾದಿಮನಿ ನೊಂದಿದ್ದರು. ಇದೇ ಕೊರಗಿನಲ್ಲಿ ಕಿನ್ನತೆಗೂ ಒಳಗಾಗಿದ್ದರು.

ಹೀಗೆ ಮಾನಸಿಕವಾಗಿ ನೊಂದಿದ್ದಂತ ಗೋಪಾಲ ಹಾದಿಮನಿ, ತನ್ನ ಸೌಮ್ಯ ಹಾದಿಮನಿ(19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ(11) ಹಾಗೂ ಸೃಜನ ಹಾದಿಮನಿ ( 8) ವರ್ಷದ ನಾಲ್ವರು ಮಕ್ಕಳಿಗೆ ವಿಷವಿಕ್ಕಿ ಸಾವಿಸಿ, ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಸಂಕೇಶ್ವರ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧರ್ಮಸ್ಥಳ : ನಾಳೆ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 54ನೇ ವರ್ಧಂತ್ಯುತ್ಸವ – Vishwanews24