Featured

ಬೆಳಪುವಿನಲ್ಲಿ ಐ.ಪಿ.ಎಲ್ ಮಾದರಿ ಕ್ರೀಡಾಂಗಣಕ್ಕೆ ಪ್ರಸ್ತಾವನೆ : ಡಾ ದೇವಿಪ್ರಸಾದ್ ಶೆಟ್ಟಿ vishwanews24

ಬೆಳಪುವಿನಲ್ಲಿ ಐ.ಪಿ.ಎಲ್ ಮಾದರಿ ಕ್ರೀಡಾಂಗಣಕ್ಕೆ ಪ್ರಸ್ತಾವನೆ : ಡಾ ದೇವಿಪ್ರಸಾದ್ ಶೆಟ್ಟಿ

ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು, ಗ್ರಾಮ ಹತ್ತಾರು ಬೃಹತ್‌ ಅಭಿವೃದ್ಧಿ ಯೋಜನೆಗಳ ಮೂಲಕ ದೇಶಕ್ಕೆ ಮಾದರಿಯಾಗಿದೆ. ದೂರದೃಷ್ಟಿತ್ವ ಮತ್ತು ಮುಂದಿನ ಯುವ ಜನಾಂಗಕ್ಕೆ ಅನುಕೂಲವಾಗುವಂತೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಪಿ. ಜಿ. ಸೆಂಟರ್, ಸಹಿತ ಸಣ್ಣ ಕೈಗಾರಿಕಾ ಪಾರ್ಕ್ ಕಾರ್ಯಗತಗೊಳ್ಳುತ್ತಿದ್ದು, ಇದೀಗ ಸುಮಾರು 17 ಎಕ್ರೆ ಪ್ರದೇಶದಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿಯವರ ಬೇಡಿಕೆಯಂತೆ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ವಿಶ್ವದರ್ಜೆಯ ಕ್ರಿಕೆಟ್ ಕ್ರೀಡಾಂಗಣ ರಚನೆಗೆ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಪರಿವೀಕ್ಷಕರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಸರ್ವೆ ಕಾರ್ಯ ನಡೆಸಲಾಗಿದೆಂದು ಬೆಳಪು ಗ್ರಾಮಾಭಿವೃದ್ಧಿಯ ರೂವಾರಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಬೆಳಪುವಿನಲ್ಲಿ ಅತ್ಯಾಧುನಿಕ ಕ್ರೀಡಾಂಗಣ ರಚನೆಯಾದಲ್ಲಿ ನಮ್ಮ ಜಿಲ್ಲೆಯ ಯುವಕರಿಗೆ ಕ್ರಿಕೆಟ್ ಬೋರ್ಡ್‌ನಲ್ಲಿ ವಿಶೇಷ ಅವಕಾಶ ದೊರಕಲಿದೆ ಹಾಗೂ ಕೆ.ಪಿ.ಎಲ್, ಮತ್ತು ಐ.ಪಿ.ಎಲ್ ಕ್ರಿಕೆಟ್ ಆಟದ ಆಯೋಜನೆ ಮೂಲಕ ಬಳಸಿಕೊಳ್ಳಲು ಅವಕಾಶವಾಗುತ್ತದೆ. ಇದರೊಂದಿಗೆ ಕ್ರಿಕೆಟ್ ತರಬೇತಿಗೂ ಅವಕಾಶ ದೊರಕುತ್ತದೆ. ಬೆಳಪು ರಾಜ್ಯದಲ್ಲಿಯೇ ಕ್ರಿಕೆಟ್ ಕ್ರೀಡಾಂಗಣದ ಮೂಲಕ ಕೂಡ ವಿಶ್ವದರ್ಜೆಯಲ್ಲಿ ಗುರುತಿಸಲ್ಪಡುತ್ತದೆ. ಈಗಾಗಲೇ ಕ್ರಿಕೆಟ್ ಬೋರ್ಡ್‌ ಮಂಡಳಿಯೊಂದಿಗೆ ಶೀಘ್ರ ಯೋಜನಾ ಕಾರ್ಯಗತಕ್ಕೆ ಮಾತುಕತೆ ನಡೆಸಲಾಗಿದೆ.

ಬೆಳಪು ಗ್ರಾಮದಲ್ಲಿ 30. ಎಕ್ರೆ ಪ್ರದೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಪಿ.ಜಿ.ಸೆಂಟರ್, ಅತ್ಯುನ್ನತ ಶಿಕ್ಷಣ ಸಂಸ್ಥೆ ಸಂಶೋಧನಾ ಕೇಂದ್ರ ಸ್ಥಾಪನೆಯು ಪ್ರಥಮ ಹಂತದಲ್ಲಿ ರೂ.40 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 5.೩೯ ಎಕ್ರೆ ಪ್ರದೇಶದಲ್ಲಿ ರೂ.10.00 ಕೋಟಿ ವೆಚ್ಚದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಯಾರಂಭಗೊಂಡಿರುತ್ತದೆ. 18.00 ಎಕ್ರೆ ಪ್ರದೇಶದಲ್ಲಿ 38 ಸಣ್ಣ ಕೈಗಾರಿಕಾ ಪಾರ್ಕ್ ಸ್ಥಾಪನೆಯಾಗಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರೂ.10.00 ಕೋಟಿ ವೆಚ್ಚ ಮಾಡಲಾಗಿರುತ್ತದೆ. ಪೊಲೀಸ್‌ ವಸತಿ ಸಮುಚ್ಛಯ ಮತ್ತು ಪೊಲೀಸ್ ಕವಾಯತುಗಾಗಿ 5.00 ಎಕ್ರೆ ಜಾಗ ಮೀಸಲಿರಿಸಲಾಗಿರುತ್ತದೆ.

2.50 ಎಕ್ರೆ ಪ್ರದೇಶವನ್ನು ಸರಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಜಾಗ ಕಾಯ್ದಿರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 300 ಎಕ್ರೆ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಿದ್ದು, 0.25 ಎಕ್ರೆ ಜಾಗವನ್ನು ಲೈಬ್ರೆರಿ ಕಟ್ಟಡಕ್ಕೆ ಕಾಯ್ದಿರಿಸಿದೆ. 5.00 ಎಕ್ರೆ ಪ್ರದೇಶದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಜಾರಂದಾಯ ಕೆರೆ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ. ಬೆಳಪು ಗ್ರಾಮ ಮುಂದಿನ ದೂರದೃಷ್ಟಿತ್ವ ಮತ್ತು ಅಭಿವೃದ್ಧಿ ಚಿಂತನೆಯೊಂದಿಗೆ ರೂಪುರೇಶ ಸಿದ್ಧಪಡಿಸಿಕೊಂಡಿದ್ದು, ಇದೀಗ ಮಂಜೂರಾತಿ ಹಂತದಲ್ಲಿದೆಂದು ತಿಳಿಸಿದರು.

‘ಬೆಳಪು ಕಾಡು’ ಎಂದೇ ಪ್ರಸಿದ್ಧಿ ಪಡೆದಿದ್ದ ಬೆಳಪುವಿಗೆ ಇದೀಗ ಹೊಳಪು ನೀಡಿ ವಿಶ್ವದ ಭೂಪಟದಲ್ಲಿ ಗುರುತಿಸುವ ರೀತಿ ಯೋಜನೆ ಹಮ್ಮಿಕೊಂಡಿರುವವರು ನಮ್ಮ ಗ್ರಾಮದ ಹೆಮ್ಮೆಯ ಅಭಿವೃದ್ಧಿಯ ರೂವಾರಿ ಡಾ| ದೇವಿಪ್ರಸಾದ್ ಶೆಟ್ಟಿ”

ಶ್ರೀಮತಿ ಶೋಭಾ ಬಿ. ಭಟ್ 

‘ಬೆಳಪು ಪಂಚಾಯತ್‌ ಅಧ್ಯಕ್ಷೆ

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

12 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

12 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago