ಬೆಳಪು: “ದಿ ವಾಲ್ನಟ್ ವೆಸ್ಟ್’ ಪೀಠೋಪಕರಣ ಉತ್ಪಾದನಾ ಘಟಕ ಉದ್ಘಾಟನೆ ಮತ್ತು ಶಂಕುಸ್ಥಾಪನೆ – vishwanews24

Featured, ಉಡುಪಿ

ಬೆಳಪು: “ದಿ ವಾಲ್ನಟ್ ವೆಸ್ಟ್’ ಪೀಠೋಪಕರಣ ಉತ್ಪಾದನಾ ಘಟಕ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಮಸ್ಕತ್‌ನ ಮಲ್ಟಿಟೆಕ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಎಲ್.ಎಲ್.ಸಿ ಕಂಪೆನಿಯಿಂದ ಪ್ರವರ್ತಿತ ಘಟಕ

ಕಾಪು : ಓಮನ್‌ನ ಮಸ್ಕತ್‌ನಲ್ಲಿ ಕಳೆದ ನಾಲ್ಕು ದಶಕಗಳಿಂದ ಇಂಟೀರಿಯರ್ ಡಿಸೆನ್ ಹಾಗೂ ಕಂಟ್ರಾಕ್ಟಿಂಗ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಮಲ್ಟಿಟೆಕ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಎಲ್.ಎಲ್.ಸಿ (ಆರ್ಕಿಟೆಕ್ಟ್ ಮತ್ತು ಇಂಜಿನಿಯರಿಂಗ್) ಕಂಪೆನಿಯ ಸಹ ಸಂಸ್ಥೆ ಬೆಂಗಳೂರಿನ ” ದಿ ವಾಲ್ನಟ್ ವೆಯ್ ‘ಇದರ ಅತ್ಯಾಧುನಿಕ ಪೀಠೋಪಕರಣ ಉತ್ಪಾದನಾ ಘಟಕವು ಬೆಳಪುವಿನ ಕೆಐಎಡಿಬಿ ಕೈಗಾರಿಕಾ ವಲಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ಮತ್ತು ಶ್ರೀಧರ ತಂತ್ರಿ ಅವರ ಪೌರೋಹಿತ್ಯದಲ್ಲಿ ” ದಿ ವಾಲ್ನಟ್ ವೆಲ್ಡ್ ‘ ಘಟಕ 1 ರ ಉದ್ಘಾಟನೆ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಉತ್ಪಾದನಾ ಘಟಕ – 2ರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಹುಟ್ಟೂರಿನ ಬಾಂಧವ್ಯ ಮಾದರಿ : ದಿ ವಾಲ್ನಟ್ ವೆಯ್ ಘಟಕವನ್ನು ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಅಂತರಾಷ್ಟ್ರೀಯ  ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿರುವ ಮಲ್ಟಿಟೆಕ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಎಲ್.ಎಲ್.ಸಿ ಕಂಪೆನಿಯು ಕರಾವಳಿಗೂ ಕಾಲಿರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ವಂತ ನೆಲದಲ್ಲಿ ಕೈಗಾರಿಕೆ ಸ್ಥಾಪಿಸಿ, ಊರಿನ ಅಭಿವೃದ್ಧಿಯ ಜತೆಗೆ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಸ್ಥಾಪಕರಾದ ದಿವಾಕರ್ ಶೆಟ್ಟಿ ಮಲ್ಲಾರು ಅವರ ಹೃದಯದಲ್ಲಿ ಹುಟ್ಟೂರಿನ ಬಗ್ಗೆ ಇರುವ ಬಾಂದವ್ಯ ಎಲ್ಲರಿಗೂ ಮಾದರಿಯಾಗಲಿದೆ ಎಂದರು.

 

ಅಂತರಾಷ್ಟ್ರೀಯ ಉದ್ಯಮ ಆರಂಭ ಹೆಮ್ಮೆಯ ಸಂಗತಿ : ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳವು ಗ್ರಾ. ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, 68 ಎಕರೆ ಪ್ರದೇಶದ ಬೆಳವು ಕೈಗಾರಿಕಾ ವಲಯದಲ್ಲಿ ಈಗಾಗಲೇ ಹಲವಾರು ಕೈಗಾರಿಕೆಗಳು ಆರಂಭಗೊಂಡಿದ್ದು ನೂರಾರು ಮಂದಿಗೆ ಉದ್ಯೋಗ ದೊರಕಿದೆ. ಇದೀಗ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ದಿವಾಕರ ಶೆಟ್ಟಿ ಅವರು ಬೆಳಪುವಿನಂತಹ ಪುಟ್ಟ ಗ್ರಾಮಕ್ಕೂ ತನ್ನ ಕೈಗಾರಿಕೆಯನ್ನು ವಿಸ್ತ ರಿಸಿರುವುದು ಶ್ಲಾಘನೀಯವಾಗಿದೆ. ಗ್ರಾಮದಲ್ಲಿ ಮತ್ತಷ್ಟು ಉದ್ಯೋಗವಕಾಶ, ಆರ್ಥಿಕ ಚೇತನ ಮತ್ತು ಸಾಮಾಜಿಕ ಪ್ರಗತಿಗೂ ಇದು ಪೂರಕವಾಗಿರಲಿದೆ ಎಂದರು.

ಗ್ರಾಮೀಣ ಜನರಿಗೆ ಉದ್ಯೋಗ, ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿ : ಮಸ್ಕತ್‌ನಲ್ಲಿ ಬ್ಯಾಂಕಿಂಗ್, ಹಾಸ್ಪಿಟಾಲಿಟಿ, ಹೆಲ್ತ್‌ಕೇರ್, ವಾಣಿಜ್ಯ ಮಳಿಗೆಗಳು, ರಿಟೇಲ್ ಔಟ್‌ಲೆಟ್ಸ್, ಆಟೋಮೊಬೈಲ್ ಶೋರೂಮ್ಸ್ ಮತ್ತು ವಸತಿ ಕಟ್ಟಡಗಳ ನಿರ್ಮಾಣ ಕ್ಷೇತ್ರದಲ್ಲಿ ವಿಶೇಷ ಖ್ಯಾತಿಯನ್ನು ಹೊಂದಿರುವ ಮಲ್ಟಿಟೆಕ್ – ಎ ಲ್.ಎಲ್.ಸಿ ಸಂಸ್ಥೆಯು 2016ರಲ್ಲಿ ಬೆಂಗಳೂರಿನಲ್ಲಿ ದಿ ವಾಲ್ನಟ್ ವೆಯ ಘಟಕವನ್ನು ಆರಂಭಿಸಿತ್ತು. ಅದರ ಮುಂದುವರಿದ ಭಾಗವಾಗಿ ಕಾಪು ತಾಲೂಕಿನ ಬೆಳಪುವಿನಲ್ಲಿ ಘಟಕವನ್ನು ವಿಸ್ತರಿಸಿ ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಅನಿವಾಸಿ ಭಾರತೀಯ ಉದ್ಯಮಿ ಶಶಿಧರ್ ಶೆಟ್ಟಿ ಮಲ್ಲಾರು, ಸಿಎಂಡಿ ದಿವಾಕರ್ ಶೆಟ್ಟಿ ಮಲ್ಲಾರು, ನಿರ್ದೇಶಕರಾದ ಸುಧೀರಾ ಡಿ. ಶೆಟ್ಟಿ, ಧನುಷ್ ಡಿ. ಶೆಟ್ಟಿ, ಧನ್ಯತ್‌ ಡಿ. ಶೆಟ್ಟಿ, ಶೀತಲ್ ಡಿ. ಶೆಟ್ಟಿ, ಕಾಪು ಮಕರ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ್ ಶೆಟ್ಟಿ ಮಲ್ಲಾರು, ಪಿಡಬ್ಲೂಡಿ ಗುತ್ತಿಗೆದಾರರಾದ ಸುರೇಶ್ ಶೆಟ್ಟಿ ಅಯೋಧ್ಯ, ಕಿಶೋರ್ ಕುಮಾರ್ ಗುರ್ಮೆ, ಲಯನ್ಸ್ ಜಿಲ್ಲಾ ಮಾಜಿ ಗವನ್ನರ್ ಸುರೇಶ್ ಶೆಟ್ಟಿ, ದಂಡತೀರ್ಥ ವಿದ್ಯಾ ಸಂಸ್ಥೆಗಳ ಸಂಚಾಲಕ ಡಾ| ಪ್ರಶಾಂತ್ ಶೆಟ್ಟಿ, ಎಲ್‌ಐ ಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಕೆ. ವಿಶ್ವನಾಥ್, ಡಾ| ಯೋಗೀಶ್ ಶೆಟ್ಟಿ, ಪ್ರದೀಪ್ ಮೆನನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ದಿ ವಾಲ್ನಟ್ ವೆಯ್ ಪೀಠೋಪಕರಣ ಉತ್ಪಾದನಾ ಘಟಕವನ್ನು ಹುಟ್ಟೂರಿನಲ್ಲಿ ಸ್ಥಾಪಿಸಿ, ಊರಿನ ಯುವಕರಿಗೂ ಉದ್ಯೋಗವನ್ನು ದೊರಕಿಸಿಕೊಡುವುದು ನಮ್ಮ ಕನಸಾಗಿತ್ತು. ಈ ಕೈಗಾರಿಕೆ ಕೇವಲ ಲಾಭಕ್ಕಾಗಿ ಅಲ್ಲ. ನಮ್ಮ ಊರಿನ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಉದ್ದೇಶವಿದೆ. ಈ ಪ್ರಯತ್ನ ಯಶಸ್ವಿಯಾಗಲು ತುಳುನಾಡಿನ ಜನತೆಯ ಪ್ರೀತಿ, ಆಶೀರ್ವಾದ ಮತ್ತು ಸಹಕಾರ ಅವಶ್ಯಕವಾಗಿದೆ.

ದಿವಾಕರ್ ಶೆಟ್ಟಿ ಮಲ್ಲಾರು
ಸ್ಥಾಪಕ ಸಿಎಂಡಿ, ಮಲ್ಟಿಟೆಕ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಎಲ್.ಎಲ್.ಸಿ

 

Leave a Reply