ಬೆಳ್ತಂಗಡಿ:ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಡಿಕ್ಕಿ :  ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ – Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ : ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಡಿಕ್ಕಿ :  ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

ಬೆಳ್ತಂಗಡಿ: ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಬೆಳ್ತಂಗಡಿ ಮಲೆಬೆಟ್ಟು ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಸುನ್ನತ್ ಕೆರೆ ನಿವಾಸಿ ಅಬ್ದುಲ್ ರಝಾಕ್ ಎಂದು ಗುರುತಿಸಲಾಗಿದೆ. ಹನೀಫ್ ಮತ್ತು ಮುಹಮ್ಮದ್ ಎಂಬವರಿಗೆ ಗಾಯಗಳಾಗಿದ್ದು ಗಂಭೀರ ಗಾಯಗೊಂಡ ಹನೀಫ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆಬೆಟ್ಟು ಬಳಿ ಗುಜಿರಿ ಸಂಗ್ರಹಿಸಲು ತೆರಳುತ್ತಿದ್ದ ಗೂಡ್ಸ್ ರಿಕ್ಷಾಗೆ ಸ್ಕೂಲ್ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಝಾಕ್ ಅವರ ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವ ಜಾದೂ ಸಮ್ಮೇಳನ : ಜಾದೂಗಾರ ಕುದ್ರೋಳಿ ಗಣೇಶ್ ಅವರ ತುಳುನಾಡು ತುಡರ್ ಚೆಂಡು ಜಾದೂವಿಗೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ – Vishwanews24

Leave a Reply