ಬೆಳ್ತಂಗಡಿ : ಕನ್ಯಾಡಿ ಸೇವಾ ಧಾಮದ ಸಮೀಪದ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಅಕ್ಟೋಬರ್ 29ರಂದು ನಡೆದಿದೆ.
ನಾವೂರು ಗ್ರಾಮದ ಹೊಡಿಕ್ಕಾರು ಗಂಗಯ್ಯ ಎಂಬವರ ಪುತ್ರ, ಬೈಕ್ ಸವಾರ ಚಂದ್ರಹಾಸ (28) ಮೃತರು ಎಂದು ಗುರುತಿಸಲಾಗಿದೆ. ಚಂದ್ರಹಾಸ ಅವರು ಸತೀಶ್ ಎಂಬವರ ಜತೆ ಸೇರಿ ಟೈಲ್ಸ್ ಹಾಕುವ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಅ.29ರಂದು ಬೆಳಿಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ತನ್ನ ಬೈಕ್‌ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಸೇವಾ ಧಾಮದ ಸಮೀಪ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಅವರ ತಲೆ ಹಾಗೂ ಕಾಲಿಗೆ ಏಟು ತಗಲಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಲ್ಲಿ ಅವರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಉಡುಪಿ: ಸೆ. 8 ರಂದು ಕ್ರೈಸ್ತರ ಮೊಂತಿ ಫೆಸ್ತ್ ಗೆ ಸರ್ಕಾರಿ ರಜೆ ನೀಡುವಂತೆ ಸಿಎಂ ಗೆ ಕಥೊಲಿಕ್ ಸಭಾ…
ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ ಮಂಗಳೂರು,: ಯುವಜನರಲ್ಲಿ ಕ್ರೀಡೆ, ಸಂಸ್ಕøತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು…
ಉಡುಪಿ: ಬಹು ಸಂಖ್ಯಾತ ಹಿಂದೂಗಳಿಗೆ ಈ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲ : ಯಶ್ಪಾಲ್ ಸುವರ್ಣ ಆಕ್ರೋಶ ಉಡುಪಿ: ರಾಜ್ಯ ಕಾಂಗ್ರೆಸ್…
ನೇಪಾಳ ಪ್ರವಾಹ : ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಕನ್ನಡಿಗರು ನಾಪತ್ತೆ ; ಕಲಬುರಗಿಯ ಇಬ್ಬರು ಸುರಕ್ಷಿತ ಬೆಂಗಳೂರು: ನೇಪಾಳ-ಟಿಬೆಟ್…
ಸುಳ್ಯ: ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಲಾರಿ ಪಲ್ಟಿ ; ಮೂವರಿಗೆ ಗಂಭೀರ ಗಾಯ ಸುಳ್ಯ :ಅರಂತೋಡಿನ ದೇವರಕೊಲ್ಲಿ ಬಳಿ…
ಬೆಳ್ತಂಗಡಿ: ಸೌಜನ್ಯಾ ಮನೆಗೆ ಡಾ| ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳದ ಸೌಜನ್ಯಾ ಮನೆಗೆ ಆರ್‌ಸ್ಎಸ್…