ಬೆಳ್ತಂಗಡಿ  : ಕುಟುಂಬಸ್ಥರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯುವತಿ ನಾಪತ್ತೆ – Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ  : ಕುಟುಂಬಸ್ಥರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯುವತಿ ನಾಪತ್ತೆ

ಬೆಳ್ತಂಗಡಿ  : ಕುಟುಂಬಸ್ಥರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯುವತಿ ಮಾ.21 ರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್ ದೇವಸ್ಥಾನ ಕೇರಿಯ ಹರಿಹರ ಕೃಪಾ ನಿವಾಸಿ ರೇಷ್ಮಾ ಆರ್. ನಾಯ್ಕ (23) ನಾಪತ್ತೆಯಾಗಿರುವ ಯುವತಿ.

ಈಕೆ ಮಾ.20 ರಂದು ಕುಮಟಾದಿಂದ ರೈಲಿನ ಮೂಲಕ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತ ಬಂದಿದ್ದು ಮಾ.21 ರಂದು ದೇವರ ದರ್ಶನ ಬಳಿಕ ಧರ್ಮಸ್ಥಳಕ್ಕೆ ಬಸ್ ಮೂಲಕ ಬಂದಿದ್ದರು. ಅಲ್ಲಿ ದೇವರ ದರ್ಶನ ಪಡೆದ ಬಳಿಕ ರಾತ್ರಿ 8:45 ಕ್ಕೆ ವಸತಿ ಗೃಹದಲ್ಲಿ ರೂಂ ಮಾಡಿದ್ದರು. ಈ ವೇಳೆ ಯುವತಿ ರೂಂ ನ ಹೊರಾಂಡದಲ್ಲಿ ಸುತ್ತಾಡುತ್ತಿದ್ದವರು ಬಳಿಕ ಏಕಾಏಕಿ ನಾಪತ್ತೆಯಾಗಿದ್ದಾರೆ.

ಉಡುಪಿ : ಶೋಭಾ ಬೇಕಲ್ ಬಿಜೆಪಿಯ ಸದಸ್ಯರೇ ಅಲ್ಲ, ಅವರಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ: ವೀಣಾ ಎಸ್ ಶೆಟ್ಟಿ ಸ್ಪಷ್ಟನೆ – Vishwanews24

ರಾತ್ರಿ ಕುಟುಂಬದವರು ರೂಂ ನಲ್ಲಿ ಉಳಿದು ಮಾ.22 ರಂದು ರೇಷ್ಮಾ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಮನೆಗೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಯುವತಿಯ ಅಜ್ಜಿ ಸುಮಿತ್ರಾ ಎಂಬವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Leave a Reply