ಬೆಳ್ತಂಗಡಿ, : ಕೂಲಿ ಕೆಲಸ ಮಾಡಿ ವಿದ್ಯಾಭ್ಯಾಸ ಹಾಗೂ ಪಿಎಚ್‌.ಡಿ ಪಡೆದ ನಿಯಾಝ್‌‌‌ ಪಣಕಜೆ -Vishwanews24

ಉಡುಪಿ, ದಕ್ಷಿಣ ಕನ್ನಡ

ಬೆಳ್ತಂಗಡಿ, : ಕೂಲಿ ಕೆಲಸ ಮಾಡಿ ವಿದ್ಯಾಭ್ಯಾಸ ಹಾಗೂ ಪಿಎಚ್‌.ಡಿ ಪಡೆದ ನಿಯಾಝ್‌‌‌ ಪಣಕಜೆ -Vishwanews24

ಬೆಳ್ತಂಗಡಿ, : ಮಡ್ಯಂತಾರು ಪಣಕಜೆಯ ನಿವಾಸಿ ನಿಯಾಝ್‌‌‌ ಪಣಕಜೆ ಅವರು ಕೂಲಿ ಮಾಡುತ್ತಲೇ ವಿದ್ಯಾಭ್ಯಾಸ ಹಾಗೂ ಪಿಎಚ್‌.ಡಿ ಪಡೆದಿದ್ದಾರೆ.

ರೋಲ್‌ ಆಫ್‌‌‌ ಕಾರ್ಪೊರೇಟಿವ್‌‌ ಬ್ಯಾಂಕಿಂಗ್‌‌ ಇನ್‌ ಸೋಶಿಯೋ ಎಕನಾಮಿಕ್‌‌ ಡೆವಲಂಪ್‌ಮೆಂಟ್‌‌ ಆಫ್‌‌ ರೂರಲ್‌‌ ಮುಸ್ಲಿಮ್‌‌‌ ಕಮ್ಯುನಿಟೀಸ್‌‌‌‌‌- ಎ ಸ್ಟಡಿ ಇನ್‌‌‌ ಡಿಕೆ ಡಿಸ್ಟ್ರಕ್ಟ್‌ ಆಫ್‌ ಕರ್ನಾಟಕ ಎನ್ನುವ ಸಂಶೋಧನಾ ಮಹಾ ಪ್ರಬಂಧಕ್ಕೆ ನಿಯಾಝ್‌ ಅವರಿಗೆ ಮಂಗಳೂರು ವಿ.ವಿ ಪಿಎಚ್‌.ಡಿ ನೀಡಿದೆ.

ಮಂಗಳೂರು: “ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ” :ನಳಿನ್ ಕುಮಾರ್ ಗೆ ಮನವಿ -Vishwanews24

ನಿಯಾಝ್‌ ಪಣಕಜೆ ಅವರು ಪಣಕಜೆಯ ಇಬ್ರಾಹಿಂ ಹಾಗೂ ಝುಬೈರಾ ದಂಪತಿಗಳ ಪುತ್ರ. ಬಡ ಕುಟುಂದವರಾದ ಇವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಮನೆಗೆಲಸ, ಮೇಸ್ತ್ರಿ ವೃತ್ತಿ, ಗದ್ದೆ-ತೋಟದ ಕೆಲಸ ಸಹಿತ ಎಲ್ಲಾ ವಿಧದ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಇವರು ಮನೆ ಮನೆಗೆ ದಿನಪತ್ರಿಕೆಯನ್ನು ವಿತರಿಸುವ ಕೆಲಸವನ್ನೂ ಮಾಡಿದ್ದಾರೆ. ನಿಯಾಝ್‌ ಅವರು ಮಂಗಳೂರಿನ ಸೈಂಟ್‌‌‌ ಆಗ್ನೆಸ್‌‌ ಪಿಜಿ ಸೆಂಟರ್‌ನಲ್ಲಿ ಎಂಕಾಂ ಪದವಿ ಪೂರೈಸಿದ್ದಾರೆ.

ಮಂಗಳೂರು : ಅಪ್ಪನ ಸಾವಿನಲ್ಲೂ ಎರಡು ಜೀವ ಉಳಿಸಿ ಅಪರೂಪದ ಕರ್ತವ್ಯನಿಷ್ಠೆ ಮೆರೆದ KMC ಯ ಡಾ.ಪದ್ಮನಾಭ ಕಾಮತ್‌ -Vishwanews24

ನಿಯಾಝ್‌ ಅವರು ಈಗಾಗಲೇ ಸುಮಾರು 55ಕ್ಕೂ ಅಧಿಕ ಸಂಶೋಧನಾತ್ಮಕ ಪ್ರಬಂಧಗಳನ್ನು ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ.

2017ರಲ್ಲಿ ನಿಯಾಝ್‌ ಅವರು ಮೈಸೂರು ವಿ.ವಿಯಿಂದ ಕೆ-ಸೆಟ್‌‌‌ ಪೂರೈಸಿದ್ದಾರೆ.

ಪ್ರಸ್ತುತ ನಿಯಾಝ್‌ ಅವರು ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ನಿಯಾಝ್‌ ಅವರು ಕೂಲಿ ಕೆಲಸ ಮಾಡುವುದನ್ನು ಮಾತ್ರ ಮರೆತಿಲ್ಲ. ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಇಂದಿಗೂ ಮುಂದುವರಿಸಿದ್ದಾರೆ.

ಉಡುಪಿ :ಲವ್‌ ಜಿಹಾದ್‌‌‌‌ ಪ್ರಕರಣದಲ್ಲಿ ಹೆಚ್ಚು ಬ್ರಾಹ್ಮಣ ಹೆಣ್ಣು ಮಕ್ಕಳೇ ಒಳಗಾಗಿದ್ದಾರೆ ; ಹಿಂದುತ್ವ ಉಳಿಯಬೇಕಾದರೆ ಸಮಸ್ತ ಬ್ರಾಹ್ಮಣರು ಒಗ್ಗಟ್ಟಾಗಬೇಕು : ಸಚ್ಚಿದಾನಂದ ಮೂರ್ತಿ -Vishwanews24