Featured

ಬೆಳ್ತಂಗಡಿ: ಕೋಳಿ ನುಂಗಿದ ಅಪರೂಪದ ಸಾರಿಬಳ ಹಾವು – Vishwanews24

ಬೆಳ್ತಂಗಡಿ: ಕೋಳಿ ನುಂಗಿದ ಅಪರೂಪದ ಸಾರಿಬಳ ಹಾವು

ಬೆಳ್ತಂಗಡಿ: ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದ್ದು ಇದನ್ನು ಉರಗ ಪ್ರೇಮಿ ಸ್ನೇಕ್ ಅಶೋಕ್‌ ಸುರಕ್ಷಿತವಾಗಿ ಹಿಡಿದು, ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಳ ಹಾವು ಕೋಳಿಮರಿಯನ್ನು ನುಂಗುತ್ತಿದ್ದ ಸಮಯ ಅದನ್ನು ಕಂಡ ಮನೆಯವರು ಉರಗಮಿತ್ರ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ.

ಅವರು ತಕ್ಷಣ ಅವರು ಆಗಮಿಸಿ ರಕ್ಷಿಸಿದ್ದಾರೆ. ಫೋರೆಸ್ಟನ್ಸ್ ಬೆಕ್ಕು ಹಾವು ಅಥವಾ ಸಾರಿಬಳ ಎಂದೇ ಕರೆಯಲ್ಪಡುವ ಈ ಹಾವು ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಳ.

ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿ ಇತ್ಯಾದಿ. ಇವುಗಳಲ್ಲೂ ಎರಡು ಪ್ರಭೇದಗಳಿದ್ದು ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ, ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ, ತಿಳಿ ಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ.

ಕೊಯ್ಯೂರಿನಲ್ಲಿ ಈ ಪ್ರಭೇದದ ಹಾವು ಕಂಡುಬಂದಿದೆ. ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಇದುವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂಡು ಕಂದು ಬಣ್ಣದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ.

ಇವು ವಿಷ ರಹಿತ ಹಾವುಗಳಾಗಿದ್ದು ಕಟ್ಟುಹಾವನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಿದ್ದಾರೆ.

ಎಲ್ಲ ಜೀವಿಗಳಂತೆ ಹಾವುಗಳಿಗೂ ಬದುಕುವ ಹಕ್ಕಿದ್ದು ಯಾವುದೇ ಹಾವು ಕಂಡು ಬಂದರೆ ಅವುಗಳನ್ನು ರಕ್ಷಿಸುವುದು ಅತಿ ಅಗತ್ಯ ಎಂದು ಸ್ನೇಕ್ ಅಶೋಕ್ ತಿಳಿಸಿದ್ದಾರೆ.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

12 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

12 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

13 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

13 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

13 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

13 hours ago