ಬೆಳ್ತಂಗಡಿ : ವಿವಾಹಿತ ಯುವಕನೊಬ್ಬ ಧರ್ಮಸ್ಥಳದ ಕಾಡಿಗೆ ಬಂದು ಸೆಲ್ಫಿ ವಿಡಿಯೋ ಮಾಡುತ್ತಾ ವಿಷ ಸೇವಿಸಿ ಕೊನೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮಹಿಮೆಯಿಂದ ಬದುಕಿ ಉಳಿದು ಇದೀಗ ಆರೋಗ್ಯವಾಗಿ ಮರಳಿ ಮನೆ ಸೇರುವಂತಾಗಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮಹಾತ್ಮಾ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥ್ ಪುರದ ನಿವಾಸಿ ಸುನಿಲ್ ಕೆ.ಎಲ್ (28) ಎಂಬಾತ ಸೆಪ್ಟೆಂಬರ್ 28 ರಂದು ಮಧ್ಯಾಹ್ನ ಎರಡು ಗಂಟೆಗೆ ಹೀರೋ ಹೊಂಡಾ ಬೈಕ್ ನಲ್ಲಿ ಬಂದಿದ್ದಾನೆ. ದೇವರ ದರ್ಶನ ಮುಗಿಸಿ ನೇತ್ರಾವತಿ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹೋಗಿ ಕುಳಿತು ತನ್ನ ಮೊಬೈಲ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿ ಕೃಷಿ ಜಮೀನಿಗೆ ಉಪಯೋಗಿಸುವ ರೌಂಡಾಪ್ ಎಂಬ ವಿಷ ಪದಾರ್ಥವನ್ನು ಕುಡಿದಿದ್ದಾನೆ. ನಂತರ ಧರ್ಮಸ್ಥಳ ದೇವರ ದರ್ಶನ ಪಡೆದು ಫೋಟೋ ಹಾಗೂ ತಾನು ವಿಷ ಸೇವಿಸಿದಾಗ ಮಾಡಿದ ವಿಡಿಯೋವನ್ನು ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾನೆ. ಇದನ್ನು ನೋಡಿದ ಕುಟುಂಬದವರು, ಸ್ನೇಹಿತರಿಗೆ ಮಾಹಿತಿ ನೀಡಿ ಅದರಂತೆ ಧರ್ಮಸ್ಥಳ ಪೊಲೀಸರನ್ನು ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಕಾಡಿನ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸುಮಾರು ಸಂಜೆ 4:15 ಕ್ಕೆ ಅರೆಪ್ರಜ್ಞಾ ಸ್ಥಿತಿಯಲ್ಲಿ ಸುನಿಲ್ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರು ಆಟೋದಲ್ಲಿ ಉಜಿರೆಯ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಆದರೆ ಅಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ್ದರಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಇದೀಗ ಪವಾಡ ಸದೃಶವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಮಹಿಮೆಯಿಂದ ಅವರು ಗುಣಮುಖರಾಗಿ ಅಕ್ಟೋಬರ್ 4 ರಂದು ಮನೆಗೆ ತೆರಳಿದ್ದಾರೆ. ಸುನಿಲ್ ಕಳೆದ ನಾಲ್ಕು ವರ್ಷಗಳಿಂದ ರಾಮನಾಥ್ ಪುರದಲ್ಲಿ ಫೂಟ್ ವೇರ್ ಶಾಪ್ ಹಾಗೂ ಫ್ಯಾನ್ಸಿ ಅಂಗಡಿ ಹೊಂದಿದ್ದು ಮದುವೆಯಾಗಿ ಆರು ತಿಂಗಳ ಮಗು ಕೂಡ ಇದೆ.
ನಾನು ಬದುಕಿದ್ದು ಮಂಜುನಾಥ ಸ್ವಾಮಿಯ ಪವಾಡದಿಂದ: ಹೆಂಡತಿ ಮಗು ತಾಯಿ ಮನೆಗೆ ಹೋಗಿದ್ದರು. ಈ ವೇಳೆ ನನ್ನ ಮನೆಯಲ್ಲಿ ಬೆಳಗ್ಗಿನ ಉಪಹಾರ ತಿಂದು ತಾಯಿ ಜೊತೆ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿದ್ದೆ . ನಂತರ ನೇರ ಬೈಕ್ ನಲ್ಲಿ ದಾರಿ ಮಧ್ಯೆ ಬರುವಾಗ ಅಂಗಡಿಯಿಂದ ವಿಷ ಖರೀದಿಸಿ ಧರ್ಮಸ್ಥಳಕ್ಕೆ ಮಧ್ಯಾಹ್ನ ಬಂದು ಮಂಜುನಾಥನ ದರ್ಶನ ಪಡೆದು ಅಲ್ಲಿಂದ ಹೊಟೇಲ್ ಲಕ್ಷ್ಮೀ ಕೃಪಾಕ್ಕೆ ಹೋಗಿ ಊಟ ಮುಗಿದ ನೇತ್ರಾವತಿ ಬಳಿ ಇರುವ ಮಹಾತ್ಮಗಾಂಧಿ ವೃತ್ತದ ಬಳಿಯ ಕಾಡಿಗೆ ಹೋಗಿ ಸೆಲ್ಫಿ ವಿಡಿಯೋ ಮಾಡಿ ವಿಷಕುಡಿದು ಮತ್ತು ಸುತ್ತಮುತ್ತಲಿನ ಎಲ್ಲಾ ಫೋಟೋಗಳನ್ನು ಅಕ್ಕ – ಅಣ್ಣನಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಆಟೋ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೂರ್ಛೆ ತಪ್ಪಿದ್ದರಿಂದ ಏನೂ ನಡಿಯಿತು ಅಂತ ಗೊತ್ತಾಗಿಲ್ಲ. ದೇವರ ದಯೆಯಿಂದ ಬದುಕಿ ಆರೋಗ್ಯವಾಗಿ ಆಸ್ಪತ್ರೆಯಿಂದ ಮನೆ ಬಂದಿದ್ದೇನೆ. ಮುಂದಿನ ವಾರ ಕುಟುಂಬದವರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದೇನೆ ಎಂದು ಸುನಿಲ್.ಕೆ.ಎಲ್ ಮಾಹಿತಿ ನೀಡಿದ್ದಾರೆ.
ಪುತ್ತೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕನಿಗೆ ಜೈಲು ಶಿಕ್ಷೆ – Vishwanews24
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…