Featured

ಬೆಳ್ತಂಗಡಿ:  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನ ಉದ್ಯಮಿಯಿಂದ ಬೃಹತ್‌ ಘಂಟೆ ಕೊಡುಗೆ – vishwanews24

ಬೆಳ್ತಂಗಡಿ:  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನ ಉದ್ಯಮಿಯಿಂದ ಬೃಹತ್‌ ಘಂಟೆ ಕೊಡುಗೆ

ಬೆಳ್ತಂಗಡಿ: ಶಿವರಾತ್ರಿಯ ಪರಮ ಪವಿತ್ರ ದಿನದಂದು ಶಿವನ ಜಾಗರಣೆ ಮಾಡುವುದು ವಿಶೇಷ. ಸಮುದ್ರಮಥನವಾದಾಗ ಒಳ್ಳೆಯ ವಸ್ತುಗಳು ಬಂದಾಗ ಎಲ್ಲರೂ ಸ್ವೀಕರಿಸಲು ಮುಂದಿದ್ದರು. ಆದರೆ ವಿಷವನ್ನು ಶಿವ ಕುಡಿದು ಲೋಕವನ್ನು ಕಾಪಾಡುತ್ತಾನೆ. ಇದಕ್ಕಾಗಿ ಶಿವನನ್ನು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.

ಬೆಂಗಳೂರಿನ ಸದಾಶಿವನಗರದ ಉದ್ಯಮಿ ದಿನೇಶ್‌ ಹಾಗೂ ಸುನೀತಾ ದಂಪತಿ ಕೊಡಮಾಡಿದ ಬೃಹತ್‌ ಗಾತ್ರದ ಘಂಟೆಯನ್ನು ಧರ್ಮಸ್ಥಳ ಅಣ್ಣಪ್ಪ ಬೆಟ್ಟದ ಮುಂಭಾಗದಲ್ಲಿ ಸ್ಥಾಪಿಸಲಾಗಿದ್ದು, ಅದನ್ನು ಫೆ.26ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿ ದಿನೇಶ್‌ ಮಾತನಾಡಿ, ಸಣ್ಣ ವಯಸ್ಸಿನಿಂದ ನಾನು ಧರ್ಮಸ್ಥಳಕ್ಕೆ ಬರುತ್ತಿದ್ದೆ. ದೇಗುಲಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ನೆಲೆಯಲ್ಲಿ ಘಂಟೆಯನ್ನು ನೀಡಿದ್ದೇನೆ. ಶಿವರಾತ್ರಿಯಂದು ಉದ್ಘಾಟನೆಯಾಗಿರುವುದು ಬಹಳ ಸಂತೋಷ ನೀಡಿದೆ ಎಂದರು.

ಉದ್ಯಮಿ ಆಪ್ತರಾದ ಪ್ರಸಾದ್‌, ರವೀಂದ್ರ, ವಿಜಯ್‌ ಕುಮಾರ್‌, ಪತ್ನಿ ಸುನೀತಾ, ಧರ್ಮಸ್ಥಳದ ಎ.ವೀರು ಶೆಟ್ಟಿ ಸಹಿತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ವಿಶೇಷತೆ
-5 ಕ್ವಿಂಟಾಲ್‌ ತೂಕದ ಗಂಟೆ
-10 ಲಕ್ಷ ರೂ. ಒಟ್ಟು ವೆಚ್ಚ
-ಲಕ್ನೋದಲ್ಲಿ 20 ದಿನಗಳಲ್ಲಿ ನಿರ್ಮಾಣ
-ಕಲ್ಲಿನ ವೃತ್ತ ಹಾಗೂ ಕಂಬದಿಂದ ಘಂಟೆ ಜೋಡಣೆ

Vishwa News 24

Recent Posts

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ ಗೊತ್ತಿಲ್ಲ : ಶೋಭಾ ಕರಂದ್ಲಾಜೆ – vishwanews24

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ : ಶೋಭಾ ಕರಂದ್ಲಾಜೆ ಬೆಂಗಳೂರು: ಸಿದ್ದರಾಮಯ್ಯ  ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ…

16 hours ago

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ – vishwanews24

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ…

17 hours ago

ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ವಿಶೇಷ ಲಕ್ಷಪುಷ್ಪಾರ್ಚನೆ – vishwanews24

ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…

17 hours ago

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ – vishwanews24

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…

18 hours ago

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…

19 hours ago

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – vishwanews24

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…

19 hours ago