ಬೆಳ್ತಂಗಡಿ: ಸುರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಕುಟುಂಬ ಸಮೇತರಾಗಿ ಭೇಟಿ – vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ಸುರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಕುಟುಂಬ ಸಮೇತರಾಗಿ ಭೇಟಿ

ಬೆಳ್ತಂಗಡಿ :  ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸುರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಕುಟುಂಬ ಸಮೇತ ಭೇಟಿ ನೀಡಿದ್ದಾರೆ.

ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ತಮ್ಮ ಹರಕೆ ತೀರಿಸಲು ದಂಪತಿ ಬಂದಿದ್ದರು ಎನ್ನಲಾಗಿದೆ.

ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆಯನ್ನು ಯಶ್ ದಂಪತಿ ತೀರಿಸಿದ್ದಾರೆ. ಹರಕೆ ಮಂಡೆ ಬಳಿ ತೆರಳಿ ಹರಕೆ ತೀರಿಸಿದ್ದಾರೆ. ಇದೇ ವೇಳೆ ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಯಶ್ ದಂಪತಿಗೆ ಸಾಥ್ ನೀಡಿದ್ದಾರೆ. ಸುರ್ಯ ದೇವಸ್ಥಾನದಿಂದ ಅವರು ಧರ್ಮಸ್ಥಳಕ್ಕೆ ತೆರಳಿದ್ದಾರೆ.

Leave a Reply