Featured

ಬೇಸಿಗೆ ಶಿಬಿರ ಮಕ್ಕಳ ಮನೋವೃದ್ಧಿಗೆ ಪೂರಕ : ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಕುಮಾರಿ ಚಿತ್ರಾಲಿ

ಬೇಸಿಗೆ ಶಿಬಿರ ಮಕ್ಕಳ ಮನೋವೃದ್ಧಿಗೆ ಪೂರಕ : ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಕುಮಾರಿ ಚಿತ್ರಾಲಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ), ರಾಷ್ಟೀಯ ಸ್ವ-ಸಹಾಯ ಸಂಘಗಳ ತರಬೇತಿ ಸಂಸ್ಥೆ, NIST ಉಡುಪಿ ಇವರ ಆಶ್ರಯದಲ್ಲಿ ದಿನಾಂಕ: ೧೭.೦೪.೨೦೨೨ ರಿಂದ ೨೪.೦೪.೨೦೨೨ರವರೆಗೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶೇಷ ಅತಿಥಿಯಾಗಿ ಆಗಮಿಸಿದ ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಕುಮಾರಿ ಚಿತ್ರಾಲಿ ತೇಜ್‌ಪಾಲ್, ಮಂಗಳೂರು ಇವರು ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಶ್ರೀ ಚರಣ್ ರಾಜ್, ಪ್ರಬಂಧಕರು, ಬ್ಯಾಂಕ್ ಆಫ್ ಬರೋಡ ಮುಖ್ಯ ಶಾಖೆ, ಉಡುಪಿ ಹಾಗೂ ಶ್ರೀ ರಾಜೇಶ್ ಶೆಟ್ಟಿ, ಅಲೆವೂರು, ಅಧ್ಯಕ್ಷರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀಮತಿ ವೀಣಾ ವಿವೇಕಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಉಡುಪಿ ಶ್ರೀ ಉಲ್ಲಾಸ್ ಮೇಸ್ತ, ಪ್ರಾಂಶುಪಾಲರು, ರಾಷ್ಟ್ರೀಯ ಸ್ವ-ಸಹಾಯ ಸಂಘಗಳ ತರಬೇತಿ ಸಂಸ್ಥೆ NIST) ಉಡುಪಿ ಇವರು ಉಪಸ್ಥಿತರಿದ್ದರು.

ಎಂಟು ದಿನದ ತರಬೇತಿಯಲ್ಲಿ ಮಕ್ಕಳಿಗೆ ಕರಕುಶಲತೆ, ಚಿತ್ರಕಲೆ, ಹಾಡು, ನೃತ್ಯ, ನಟನೆ, ಪ್ರಾಚೀನ ಆಟಗಳ ಪರಿಚಯ, ಕುಣಿತ ಭಜನೆ, ಮಣ್ಣಿನ ಕಲಾಕೃತಿಗಳ ರಚನೆ, ಹಳ್ಳಿಯ ಆಟಗಳು, ಅಜ್ಜಿ-ಕತೆಗಳು, ನೈತಿಕ ಮೌಲ್ಯಗಳು, ಚಿತ್ರಕತೆ ರಚನೆ, ಮಾತೃವಂದನಾ ಕಾರ್ಯಕ್ರಮ, ಪಾಲಕರ ಒಡನಾಟದ ಆಟಗಳು, ತಾಯಿಯ ಕೈತುತ್ತು, ಪ್ರತಿದಿನ ಮೌನ ಭೋಜನ, ಪ್ರತಿಭಾ ಪ್ರದರ್ಶನ ನಡೆಯಲಿದೆ.ಈ ಶಿಬಿರವು ಎಂಟು ದಿನಗಳ ಕಾಲ ನಡೆಯಲಿದ್ದು ನುರಿತ ತಜ್ಞರು ಈ ತರಬೇತಿಯನ್ನು ನೀಡಲಿದ್ದಾರೆ. ತರಬೇತಿಯಲ್ಲಿ ಸಂಸ್ಕೃತಿ- ಸಂಸ್ಕಾರ ಏಕಾಗ್ರತೆ ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಲಾಗದೆ ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಉಲ್ಲಾಸ್ ಮೇಸ್ತರವರು ತಿಳಿಸಿ ಶಿಬಿರದ ಉದ್ದೇಶಗಳ ಬಗ್ಗೆ ಮಾತಾನಾಡಿ ಸ್ವಾಗತಿಸಿದರು.

ಆಗಮಿಸಿದ ಮುಖ್ಯ ಅತಿಥಿಗಳು ಎಲ್ಲಾ ಮಕ್ಕಳಿಗೆ ಶುಭಕೋರಿದರು.. ಕಾರ್ಯಕ್ರಮದ ನಿರೂಪರಣೆಯನ್ನು ಉಪನ್ಯಾಸಕಾರದ ಶ್ರೀರಮೇಶ್‌ರವರು ನೆರವೇರಿಸಿ, ರಂಗತರಬೇತುದಾರರಾದ ಶ್ರೀ ಚಂದ್ರಹಾಸ್ ಭಂಡಾರಿಯವರು ಧನ್ಯವಾದವನ್ನಿತ್ತರು. ಈ ಸಂದರ್ಭದಲ್ಲಿ ಬಾಲನಟಿ ಕುಮಾರಿ ಚಿತ್ರಾಲಿ ತೇಜ್‌ಪಾಲ್‌ರನ್ನು ಅಭಿನಂದಿಸಲಾಯಿತು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago