ಬೇಸಿಗೆ ಶಿಬಿರ ಮಕ್ಕಳ ಮನೋವೃದ್ಧಿಗೆ ಪೂರಕ : ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಕುಮಾರಿ ಚಿತ್ರಾಲಿ
ಬೇಸಿಗೆ ಶಿಬಿರ ಮಕ್ಕಳ ಮನೋವೃದ್ಧಿಗೆ ಪೂರಕ : ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಕುಮಾರಿ ಚಿತ್ರಾಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ), ರಾಷ್ಟೀಯ ಸ್ವ-ಸಹಾಯ ಸಂಘಗಳ ತರಬೇತಿ ಸಂಸ್ಥೆ, NIST ಉಡುಪಿ ಇವರ ಆಶ್ರಯದಲ್ಲಿ ದಿನಾಂಕ: ೧೭.೦೪.೨೦೨೨ ರಿಂದ ೨೪.೦೪.೨೦೨೨ರವರೆಗೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶೇಷ ಅತಿಥಿಯಾಗಿ ಆಗಮಿಸಿದ ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಕುಮಾರಿ ಚಿತ್ರಾಲಿ ತೇಜ್ಪಾಲ್, ಮಂಗಳೂರು ಇವರು ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಶ್ರೀ ಚರಣ್ ರಾಜ್, ಪ್ರಬಂಧಕರು, ಬ್ಯಾಂಕ್ ಆಫ್ ಬರೋಡ ಮುಖ್ಯ ಶಾಖೆ, ಉಡುಪಿ ಹಾಗೂ ಶ್ರೀ ರಾಜೇಶ್ ಶೆಟ್ಟಿ, ಅಲೆವೂರು, ಅಧ್ಯಕ್ಷರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀಮತಿ ವೀಣಾ ವಿವೇಕಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಉಡುಪಿ ಶ್ರೀ ಉಲ್ಲಾಸ್ ಮೇಸ್ತ, ಪ್ರಾಂಶುಪಾಲರು, ರಾಷ್ಟ್ರೀಯ ಸ್ವ-ಸಹಾಯ ಸಂಘಗಳ ತರಬೇತಿ ಸಂಸ್ಥೆ NIST) ಉಡುಪಿ ಇವರು ಉಪಸ್ಥಿತರಿದ್ದರು.

ಎಂಟು ದಿನದ ತರಬೇತಿಯಲ್ಲಿ ಮಕ್ಕಳಿಗೆ ಕರಕುಶಲತೆ, ಚಿತ್ರಕಲೆ, ಹಾಡು, ನೃತ್ಯ, ನಟನೆ, ಪ್ರಾಚೀನ ಆಟಗಳ ಪರಿಚಯ, ಕುಣಿತ ಭಜನೆ, ಮಣ್ಣಿನ ಕಲಾಕೃತಿಗಳ ರಚನೆ, ಹಳ್ಳಿಯ ಆಟಗಳು, ಅಜ್ಜಿ-ಕತೆಗಳು, ನೈತಿಕ ಮೌಲ್ಯಗಳು, ಚಿತ್ರಕತೆ ರಚನೆ, ಮಾತೃವಂದನಾ ಕಾರ್ಯಕ್ರಮ, ಪಾಲಕರ ಒಡನಾಟದ ಆಟಗಳು, ತಾಯಿಯ ಕೈತುತ್ತು, ಪ್ರತಿದಿನ ಮೌನ ಭೋಜನ, ಪ್ರತಿಭಾ ಪ್ರದರ್ಶನ ನಡೆಯಲಿದೆ.ಈ ಶಿಬಿರವು ಎಂಟು ದಿನಗಳ ಕಾಲ ನಡೆಯಲಿದ್ದು ನುರಿತ ತಜ್ಞರು ಈ ತರಬೇತಿಯನ್ನು ನೀಡಲಿದ್ದಾರೆ. ತರಬೇತಿಯಲ್ಲಿ ಸಂಸ್ಕೃತಿ- ಸಂಸ್ಕಾರ ಏಕಾಗ್ರತೆ ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಲಾಗದೆ ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಉಲ್ಲಾಸ್ ಮೇಸ್ತರವರು ತಿಳಿಸಿ ಶಿಬಿರದ ಉದ್ದೇಶಗಳ ಬಗ್ಗೆ ಮಾತಾನಾಡಿ ಸ್ವಾಗತಿಸಿದರು.
ಆಗಮಿಸಿದ ಮುಖ್ಯ ಅತಿಥಿಗಳು ಎಲ್ಲಾ ಮಕ್ಕಳಿಗೆ ಶುಭಕೋರಿದರು.. ಕಾರ್ಯಕ್ರಮದ ನಿರೂಪರಣೆಯನ್ನು ಉಪನ್ಯಾಸಕಾರದ ಶ್ರೀರಮೇಶ್ರವರು ನೆರವೇರಿಸಿ, ರಂಗತರಬೇತುದಾರರಾದ ಶ್ರೀ ಚಂದ್ರಹಾಸ್ ಭಂಡಾರಿಯವರು ಧನ್ಯವಾದವನ್ನಿತ್ತರು. ಈ ಸಂದರ್ಭದಲ್ಲಿ ಬಾಲನಟಿ ಕುಮಾರಿ ಚಿತ್ರಾಲಿ ತೇಜ್ಪಾಲ್ರನ್ನು ಅಭಿನಂದಿಸಲಾಯಿತು.
