ಬೈಂದೂರು ಕಾಲೇಜಿನಲ್ಲಿ ಕೂಡ ಹಿಜಾಬ್ ವಿವಾದ ; ಕೇಸರಿ ಶಾಲು ಹಾಕಿಕೊಂಡು ಬಂದ ಹಿಂದೂ ವಿದ್ಯಾರ್ಥಿಗಳು – Vishwanews24

Featured, ಉಡುಪಿ

ಬೈಂದೂರು ಕಾಲೇಜಿನಲ್ಲಿ ಕೂಡ ಹಿಜಾಬ್ ವಿವಾದ..

ಕೇಸರಿ ಶಾಲು ಹಾಕಿಕೊಂಡು ಬಂದ ಹಿಂದೂ ವಿದ್ಯಾರ್ಥಿಗಳು..

ಬೈಂದೂರು: ಉಡುಪಿ , ಕುಂದಾಪುರ ಕಾಲೇಜಿನಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ಪ್ರಕರಣದ ಬೆನ್ನಲ್ಲೇ ಇದೀಗ ಬೈಂದೂರು ಕಾಲೇಜಿನಲ್ಲಿ ಇಂತದ್ದೇ ವಿವಾದ ಹುಟ್ಟಿಕೊಂಡಿದೆ.

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹಾಜರಾಗಿದ್ದಾರೆ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರೂ ತರಗತಿಗೆ ಪ್ರವೇಶ ಪಡೆದಿದ್ದಾರೆ.

ಇದನ್ನೂ ಓದಿ :

ಬಂಟ್ವಾಳ: ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಹೇಳನ ಪ್ರಕರಣ : ಆರೋಪಿ  ಪೊಲೀಸ್ ವಶಕ್ಕೆ – Vishwanews24

ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಬ್‌ ಧರಿಸಿ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕಾಲೇಜಿನ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಈ ವೇಳೆಯಲ್ಲಿ ಕಾಲೇಜಿನ ಉಪನ್ಯಾಸಕರು ಸಮವಸ್ತ್ರ ಧರಿಸಿದರೆ ಮಾತ್ರವೇ ತರಗತಿಗೆ ಪ್ರವೇಶ ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆಯಲ್ಲಿ ಉಪನ್ಯಾಸಕರು ಹಾಗೂ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಅಂತಿಮವಾಗಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.

https://fb.watch/aYBo0qGXK0/

Leave a Reply