ಬೈಂದೂರು : ಕೇವಲ ದಾಂಪತ್ಯ ಜೀವನದಲ್ಲಿ ಮಾತ್ರವಲ್ಲ ಸಾವಿನಲ್ಲೂ ಒಂದಾದ ವೃದ್ಧ ದಂಪತಿ – Vishwanews24

Featured, ಉಡುಪಿ

ಬೈಂದೂರು : ಕೇವಲ ದಾಂಪತ್ಯ ಜೀವನದಲ್ಲಿ ಅಲ್ಲ ಸಾವಿನಲ್ಲೂ ಒಂದಾದ ದಂಪತಿ

ಬೈಂದೂರು: ಕೇವಲ ದಾಂಪತ್ಯ ಜೀವದಲ್ಲಿ ಅಲ್ಲ ಸಾವಿನಲ್ಲೂ ದಂಪತಿ ಒಂದಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗ (85) ವಯೋಸಹಜ ಅನಾರೋಗ್ಯದಿಂದ ರವಿವಾರ ರಾತ್ರಿ ಪತ್ನಿ ಮನೆಯಾದ ಬಿಜೂರಿನಲ್ಲಿ ನಿಧನರಾಗಿದ್ದರು.

ಪತಿಯ ಅಂತ್ಯ ಸಂಸ್ಕಾರದ ಸಿದ್ಧತೆಗಳ ನಡುವೆ ಪತ್ನಿ ಕೃಷ್ಣಿ ದೇವಾಡಿಗ (77) ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮನೆಯೊಳಗೆ ಮುಡೂರ ದೇವಾಡಿಗರ ಮೃತದೇಹವನ್ನಿಡಲಾಗಿತ್ತು.

ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು. ಸಿದ್ದತೆಗಳ ನಡುವೆಯೇ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಮುಡೂರ ಅವರ ಪತ್ನಿ ಕೂಡ ನಿಧನರಾಗಿದ್ದು, ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ದಂಪತಿ ಐವರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬೆಳ್ತಂಗಡಿ: ಮಕ್ಕಳ ಪ್ರವಾಸದ ಬಸ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ- ಇಬ್ಬರಿಗೆ ಗಂಭೀರ ಗಾಯ – Vishwanews24

Leave a Reply