ಬೈಂದೂರು: ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ: ಸಹಸವಾರ ಸಾವು , ಸವಾರ ಗಂಭೀರ – vishwanews24

Featured, ಉಡುಪಿ

ಬೈಂದೂರು: ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ: ಸಹಸವಾರ ಸಾವು , ಸವಾರ ಗಂಭೀರ

ಬೈಂದೂರು: ನಿಯಂತ್ರಣ ತಪ್ಪಿದ ಸ್ಕೂಟರ್‌ ಡಿವೈಡರ್‌ ಗೆ ಡಿಕ್ಕಿ ಹೊಡೆದು ಸಹಸವಾರ ಮೃತಪಟ್ಟು, ಸವಾರ ಗಂಭೀರ ಗಾಯಗೊಂಡ ಘಟನೆ ಅ.14ರ ಸೋಮವಾರ ಇಲ್ಲಿನ ಬಾರ್‌ ಮುಂಭಾಗದ ಫ್ಲೈ ಓವರ್‌ ರಸ್ತೆಯಲ್ಲಿ ನಡೆದಿದೆ.

ಅಬ್ದುಲ್‌ ಮುನೀರ್‌ ಮೃತಪಟ್ಟವರು ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಸವಾರ ಅಬ್ದುಲ್‌ ನಝೀರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶಬರಿಮಲೆಯಲ್ಲಿಆನ್‌ಲೈನ್ ನೋಂದಣಿ ಇಲ್ಲದೆ ಬರುವ ಯಾತ್ರಾರ್ಥಿಗಳಿಗೂ ಸುಗಮ ದರ್ಶನ : ಕೇರಳ ಮುಖ್ಯಮಂತ್ರಿ – vishwanews24

ಉಪ್ಪುಂದದಿಂದ ಶಿರೂರಿಗೆ ಹೋಗುತ್ತಿದ್ದ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅಬ್ದುಲ್‌ ಮುನೀರ್‌ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.
ಈ ಘಟನೆಯ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply