ಭಾರೀ ಮಳೆಗೆ ಗೋಡೆ ಕುಸಿದು ಎಂಎಸ್ಸಿ ವಿದ್ಯಾರ್ಥಿನಿ ಬಲಿ

Featured, ಉಡುಪಿ

ಕುಂದಾಪುರ: ಕರಾವಳಿಯಲ್ಲಿ ಬೈಂದೂರಿನಲ್ಲಿಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು  ಬೈಂದೂರಿ ಉಳ್ಳೂರಿನ ಹೇರೂರಿನಲ್ಲಿ  ದೇವಾಲಯದ ಆವರಣ  ಗೋಡೆ ಕುಸಿದು ಬಿದ್ದ ಪರಿಣಾಮ 22 ವರ್ಷ ಪ್ರಾಯದ ಎಂಎಸ್ಸಿ  ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ ಅವಘಡ  ಶುಕ್ರವಾರ ಬೆಳಗ್ಗೆ  ನಡೆದಿದೆ.

ನಡೆದುಕೊಂಡು ಹೋಗುತ್ತಿದ್ದ ವೇಳೆ ನಂದಿಕೇಶ್ವರದ ದೇವಸ್ಥಾನದ ಗೋಡೆ ಕುಸಿದು ಬಿದ್ದಿದ್ದು ಸ್ಥಳದಲ್ಲೇ ವಿದ್ಯಾರ್ಥಿನಿ ಧನ್ಯಾ ಕೆ. ದಾರುಣವಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಚಂದ್ರಶೇಖರ ಶೆಟ್ಟಿ ಮತ್ತು ಹೇಮಾವತಿ ಶೆಟ್ಟಿ ಅವರ ಪುತ್ರಿಯಾಗಿರುವ ಧನ್ಯಾ ಮಂಗಳೂರು ವಿವಿ ಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದರು.ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ.

ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.  ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.