Featured

ಬೈಕಂಪಾಡಿ : ಅನೈರ್ಮಲ್ಯ ಕಾರಣ; ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಬೀಗ – vishwanews24

ಬೈಕಂಪಾಡಿ : ಅನೈರ್ಮಲ್ಯ ಕಾರಣ; ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಬೀಗ

ಸುರತ್ಕಲ್:‌ ಸುರತ್ಕಲ್‌ ವ್ಯಾಪ್ತಿಯಲ್ಲಿ ದ.ಕ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಅನೈರ್ಮಲ್ಯದ ಕಾರಣಕ್ಕಾಗಿ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಫಾರ್ಚುನ್ ಇಂಡಸ್ಟ್ರೀಸ್ ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಅಧಿಕಾರಿಗಳು ಬೀಗ ಜಡಿದರು.

ಸೋಮವಾರ  ಕಾರ್ಯಾಚರಣೆ ಆರಂಭಿಸಿದ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ಐದು ತಂಡಗಳು ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿರುವ ಫಾರ್ಚುನ್ ಇಂಡಸ್ಟ್ರೀಸ್ ಚೀಸ್ ಬಾಲ್ ಸ್ನಾಕ್ಸ್ ತಯಾರಿಸುತ್ತಿದ್ದ ಘಟಕಕ್ಕೆ ದಾಳಿ ಮಾಡಿತು. ಈ ವೇಳೆ ಸ್ನಾಕ್ಸ್ ಗಳನ್ನು ಕರಿಯಲು ಹಲವು ಬಾರಿ ಉಪಯೋಗಿಸಿದ್ದ ಕಪ್ಪು ಬಣ್ಣದ ಎಣ್ಣೆಯನ್ನೇ ಉಪಯೋಗಿಸುತ್ತಿದ್ದು ದನ್ನು ಅಧಿಕಾರಿಗಳು ಗಮನಿಸಿದರು. ಜೊತೆಗೆ ತಿಂಡಿ ತಿಳಿಸುಗಳನ್ನು ಕಸದ ಬುಟ್ಟಿಯ ಬಳಿಯೇ ಶೇಖರಿಸಿರುವುದು ಮತ್ತು ಹೆಗ್ಗಣಗಳ ಓಡಾಟವನ್ನು ಅಧಿಕಾರಿಗಳ ತಂಡ ಗಮನಿಸಿತು. ಅಲ್ಲದೆ, ಘಟಕದಲ್ಲಿ ಅನೈರ್ಮಲ್ಯವನ್ನು ಕಂಡುಕೊಂಡ ತಂಡ ಘಟಕಕ್ಕೆ ಬೀಗ ಜಡಿದು ಸೀಸ್ ಮಾಡಿತು.ಇನ್ನು ಸುರತ್ಕಲ್‌ನಲ್ಲಿರುವ ಸೂರಜ್ ಇಂಟರ್‌ ನ್ಯಾಷನಲ್‌ ಹೋಟೆಲ್‌ ನಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳದಿರು ವುದನ್ನು ಗಮನಿಸಿದ ಅಧಿಕಾರಿಗಳ ತಂಡವು ಆಹಾರ ಮಾದರಿಯ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತು. ಅಲ್ಲದೆ, ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮಕೈಗೊಂಡು ನೋಟಿಸ್‌ ಜಾರಿ ಮಾಡಿತು.

 

ಸುರತ್ಕಲ್‌ ನಲ್ಲಿರುವ ಮೋರ್ ರಿಟೇಲ್ ಮಳಿಗೆ, ಬ್ಲಿಂಕ್ ಇಟ್ ಆನ್ಲೈನ್ ಪ್ಲಾಟ್ಫಾರ್ಮ್, ಮೆಕ್ – ಡೊನಾಲ್ಡ್ಸ್ ರೆಸ್ಟೋರೆಂಟ್, ಎನ್ಐಟಿಕೆ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಗಳ ಆಹಾರ ಸರಬರಾಜು ಮಾಡುವ ಅಡುಗೆ ಕೋಣೆಳಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿತು. ಸೂರಜ್ ಇಂಟರ್‌ ನ್ಯಾಷನಲ್ ಹೋಟೆಲ್ ಮತ್ತು ಮಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಿಂದ ಆಹಾರ ಮಾದರಿಯ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತು.

Vishwa News 24

Recent Posts

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ – vishwanews24

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ ಮಂಗಳೂರು: ನಗರದ ಪಂಪ್‌ವೆಲ್ ಬಳಿ ಮೊಟ್ಟೆ…

5 hours ago

ಚಿಕಿತ್ಸೆಗೂ ಮುನ್ನವೇ ವೆಚ್ಚದ ಮಾಹಿತಿ ಕಡ್ಡಾಯ :ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ – vishwnaews24

ಚಿಕಿತ್ಸೆಗೂ ಮುನ್ನವೇ ವೆಚ್ಚದ ಮಾಹಿತಿ ಕಡ್ಡಾಯ :ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ…

6 hours ago

ಶಬರಿಮಲೆಯಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭ ; ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು -vishwanews24

ಶಬರಿಮಲೆಯಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭ ; ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು ಶಬರಿಮಲೆ : ಪವಿತ್ರ ಕ್ಷೇತ್ರ ಶಬರಿಮಲೆ…

7 hours ago

ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ ; 236 ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಮಂಗಳೂರು :ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ.. ಟೇಕ್ ಆಫ್ ವೇಳೆ ಇಂಜಿನ್‌ನಲ್ಲಿ ದೋಷ .. 236 ಪ್ರಯಾಣಿಕರು ಅಪಾಯದಿಂದ…

7 hours ago

ಕಾಪು ಹೊಸ ಮಾರಿಗುಡಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಭೇಟಿ : ವಿಶ್ವ ನ್ಯೂಸ್24

**ಕಾಪು ಹೊಸ ಮಾರಿಗುಡಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಭೇಟಿ** ಕಾಪು: ಕೇಂದ್ರ ಉಕ್ಕು ಮತ್ತು ಬೃಹತ್…

1 day ago

ಮತಾಂತರ ನಿಷೇಧ, ಗೋಹತ್ಯೆ ಪ್ರತಿಬಂಧಕ ಕಾಯ್ದೆ ವಾಪಸು ಪಡೆದರೆ ರಾಜ್ಯಾದ್ಯಂತ ಬೃಹತ್ ಜನಾಂದೋಲನ: ವಿಹಿಂಪ ಎಚ್ಚರಿಕೆ – vishwanews24

ಮತಾಂತರ ನಿಷೇಧ, ಗೋಹತ್ಯೆ ಪ್ರತಿಬಂಧಕ ಕಾಯ್ದೆ ವಾಪಸು ಪಡೆದರೆ ರಾಜ್ಯಾದ್ಯಂತ ಬೃಹತ್ ಜನಾಂದೋಲನ: ವಿಹಿಂಪ ಎಚ್ಚರಿಕೆ ಉಡುಪಿ: ರಾಜ್ಯ ಸರ್ಕಾರವು…

1 day ago