ಬ್ಯಾಂಕ್ಗಳಿಗೆ 100% ಅಸಲು ಪಾವತಿ ಮಾಡ್ತೀನಿ : ವಿಜಯ್ ಮಲ್ಯ
ನವದೆಹಲಿ: ತಲೆ ಮರೆಸಿಕೊಂಡಿರುವ ಸುಸ್ತಿದಾರ ವಿಜಯ್ ಮಲ್ಯ ಶೇ.100 ರಷ್ಟು ಸಾಲದ ಮೂಲ ಮೊತ್ತವನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಕಟ್ಟದೆ ವಿದೇಶಕ್ಕೆ ಪಲಾಯನ ಮಾಡಿ ಸದ್ಯ ಲಂಡನ್‌ನಲ್ಲಿ ಭಾರತಕ್ಕೆ ಗಡೀಪಾರಾಗುವ ಕೋರ್ಟ್ ಕೇಸನ್ನು ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ, ಇದರಿಂದ ಉಂಟಾದ ನಷ್ಟಕ್ಕೇ ಬ್ಯಾಂಕ್ ನಿಂದ ಪಡೆದ ಸಾಲದ ಹಣ ಖರ್ಚಾಗಿತ್ತು. ಆದರೆ ಶೇ.100 ರಷ್ಟು ಮೂಲ ಹಣವನ್ನು ಬ್ಯಾಂಕ್ ಗಳಿಗೆ ಮರುಪಾವತಿ ಮಾಡಲು ಸಿದ್ಧನಿದ್ದೇನೆ ದಯವಿಟ್ಟು ತೆಗೆದುಕೊಳ್ಳಿ” ಎಂದು ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಮನವಿ ಮಾಡಿದ್ದಾರೆ. .
ನಾನು ಬ್ಯಾಂಕ್ ಹಣದೊಂದಿಗೆ ಪರಾರಿಯಾಗಿದ್ದೀನಿ ಅಂತ ಮಾಧ್ಯಮದವರು ಹಾಗೂ ರಾಜಕಾರಣಿಗಳು ಪದೇ ಪದೇ ಹೇಳ್ತಿದ್ದಾರೆ. ಇದೆಲ್ಲಾ ಸುಳ್ಳು. ನಾನು ಕರ್ನಾಟಕ ಹೈಕೋರ್ಟ್ ಮುಂದೆ, ಸೆಟಲ್ಮೆಂಟ್ ಆಫರ್ ಮಾಡಿದ್ದನ್ನು ಯಾಕೆ ಹೇಳ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ..
ನನಗೆ ನ್ಯಾಯೋಚಿತ ವಿಚಾರಣೆಯ ಅವಕಾಶವನ್ನು ಯಾಕಾಗಿ ನೀಡಲಾಗುತ್ತಿಲ್ಲ. ಆ ಬಗ್ಗೆ ನನಗೆ ದುಃಖವಿದೆ; ನನ್ನ ಬ್ಯಾಂಕ್ ಸಾಲದ ಶೇ.100 ಅಸಲು ಮೊತ್ತವನ್ನು ತೀರಿಸುವ ನನ್ನ ಈ ಪ್ರಸ್ತಾವವನ್ನು ಕರ್ನಾಟಕ ಹೈಕೋರ್ಟ್ ಮುಂದೆ ಮಂಡಿಸಬೇಕೆಂದು ನಾನು ಕೋರುತ್ತೇನೆ” ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.


