ಬ್ಯಾನರ್​ ಹಾಕಲು ಅವಕಾಶ ಮಾಡಿಕೊಡಬೇಡಿ, ಬ್ಯಾನರ್ ಸಂಸ್ಕೃತಿಯನ್ನ ಕಿತ್ತೊಗೆಯಿರಿ : ಪ್ರಧಾನಿಗೆ ಕಮಲ್​ ಹಾಸನ್ ಮನವಿ -Vishwanews24

Featured, ರಾಷ್ಟ್ರ ನ್ಯೂಸ್

ಚೆನ್ನೈ: ನಟ ಕಮ್​ ರಾಜಕಾರಣಿ ಕಮಲ್​ ಹಾಸನ್​, ಪ್ರಧಾನಿ ಮೋದಿ ಅವರಿಗೊಂದು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಯುವತಿಯೊಬ್ಬರ ಮೇಲೆ ಬ್ಯಾನರ್​ ಬಿದ್ದು, ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಬ್ಯಾನರ್​ ಸಂಸ್ಕೃತಿ ಬಗ್ಗೆ ಸಿಡಿದೆದ್ದಿರುವ ಕಮಲ್​ ಹಾಸನ್​, ಬ್ಯಾನರ್​ ಹಾಕಲು ಅವಕಾಶ ಮಾಡಿಕೊಡಬೇಡಿ, ಬ್ಯಾನರ್ ಸಂಸ್ಕೃತಿಯನ್ನ ಕಿತ್ತೊಗೆಯಿರಿ ಅಂತ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ​ಪಿಂಗ್​ ಅವರು ಮುಂದಿನ ವಾರ ತಮಿಳುನಾಡಿನ ಐತಿಹಾಸಿಕ ನಗರ ಮಹಾಬಲಿಪುರಂಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ಜೊತೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಈ ಇಬ್ಬರು ನಾಯಕರ ಭೇಟಿ ವೇಳೆ ಬ್ಯಾನರ್​ ಹಾಕಲು ಅವಕಾಶ ಮಾಡಿಕೊಡಿ ಅಂತ ತಮಿಳುನಾಡು ಸರ್ಕಾರ, ಹೈಕೋರ್ಟ್​ ಮೆಟ್ಟಿಲೇರಿದೆ.

ಬ್ಯಾನರ್​ ಸಂಸ್ಕೃತಿಯನ್ನ ಕೊನೆಗೊಳಿಸಲು ಮೊದಲ ಹೆಜ್ಜೆ ಇಡುವಲ್ಲಿ ನೀವು ಮೊದಲಿಗರಾಗಿ ಕಾರ್ಯ ನಿರ್ವಹಿಸಿದರೆ, ಅದು ತಮಿಳರ ಭಾವನೆಗಳ ಬಗ್ಗೆ ನಿಮ್ಮ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಅದು ನಿಮಗೆ ದೊಡ್ಡ ಪ್ರಚಾರವನ್ನು ಕೊಡುತ್ತದೆ ಅಂತಾ ಕಮಲ್​ ಹಾಸನ್​ ಟ್ವೀಟ್​ ಮಾಡಿದ್ದಾರೆ.