ಬ್ರಹ್ಮಾವರ : ಜುಲೈ 6 ನಂತರ ಹಂತ-ಹಂತವಾಗಿ ಪೂಜೆ ಪುನಸ್ಕಾರಕ್ಕೆ ಅವಕಾಶ : ಸಚಿವ ಕೋಟ -Vishwanews24

Featured, ಉಡುಪಿ

ಬ್ರಹ್ಮಾವರ : ಜುಲೈ 6 ನಂತರ ಹಂತ-ಹಂತವಾಗಿ ಪೂಜೆ ಪುನಸ್ಕಾರಕ್ಕೆ ಅವಕಾಶ : ಸಚಿವ ಕೋಟ -Vishwanews24

ಬ್ರಹ್ಮಾವರ: ದೇಗುಲಗಳನ್ನು ಭಕ್ತರ ಪೂಜೆ ಪುನಸ್ಕಾರಕ್ಕೆ ಮುಕ್ತಗೊಳಿಸುವ ಕುರಿತು ಬೇಡಿಕೆ ಇದೆ. ಆದರೆ ಒಂದೇ ಬಾರಿಗೆ ದೇಗುಲಗಳನ್ನು ತೆರೆದು ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಿದರೆ ಭಕ್ತರು ಮುಗಿ ಬೀಳುವ ಸಂಭವವಿದೆ. ಹೀಗಾಗಿ ಜುಲೈ 6 ಅನಂತರ ಲಾಕ್ಡೌನ್ ನಿಯಮದಲ್ಲಿ ಇನ್ನಷ್ಟು ಬದಲಾವಣೆಯಾಗಲಿದ್ದು ಆಗ ಹಂತ-ಹಂತವಾಗಿ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ಅಭಿವೃದ್ಧಿ ಸಭೆಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರಿಗೆ ಈ ವಿಚಾರ ತಿಳಿಸಿದರು.

ದೈವ ಪರಿಚಾರಕರು, ದರ್ಶನ ಪಾತ್ರಿಗಳನ್ನು ಕಲಾವಿದರ ಸಾಲಿಗೆ ಸೇರ್ಪಡೆಗೊಳಿಸಿ ಪರಿಹಾರಧನವನ್ನು ನೀಡಲಾಗುತ್ತಿದೆ. ದೇಗುಲಗಳು ತೆರೆದ ಮೇಲೆ ನಾಗಾರಾಧನೆ, ಕೋಲ ಮುಂತಾದ ಸೇವೆಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು ಸಚಿವರು ತಿಳಿಸಿದರು.