ಬ್ರಹ್ಮಾವರ: ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ : ಬೈಕಾಡಿ ಸುಪ್ರಸಾದ್ ಶೆಟ್ಟಿ – Vishwanews24
ಬ್ರಹ್ಮಾವರ: ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ : ಬೈಕಾಡಿ ಸುಪ್ರಸಾದ್ ಶೆಟ್ಟಿ
ಬ್ರಹ್ಮಾವರ: ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಟೆಂಡರ್ ಪ್ರಕ್ರಿಯೆಯನ್ನು ಸರಕಾರದ ಸೂಚನೆಯ ಪ್ರಕಾರವೇ ನಿರ್ವ ಹಿಸಲಾಗಿದೆ. ನಿರುಪಯುಕ್ತ ಯಂತ್ರೋ ಪಕರಣಗಳ ಮಾರಾಟದಿಂದ ಬಂದ ಹಣದಿಂದ ಕಾರ್ಖಾನೆಯ ಎಲ್ಲ ಸಾಲವನ್ನು ಪಾವತಿಸಿದ್ದು ಸಕ್ಕರೆ ಕಾರ್ಖಾನೆ ಸಾಲ ಮುಕ್ತವಾಗಿದೆ. ಯಾವುದೇ ತನಿಖೆಗೆ ಸಹಕಾರ ನೀಡುತ್ತೇವೆ ಎಂದು ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
20 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುಜರಿ ಮಾರಾಟದಿಂದ ಬಂದ ಹಣದಿಂದ ಕಾರ್ಖಾನೆಯ ವಿವಿಧ ಬಾಕಿ ಮತ್ತು ಸಾಲಗಳಾದ ವಾಣಿಜ್ಯ ಇಲಾಖೆಯ ತೆರಿಗೆ ಬಾಕಿ 1,75,65,423 ರೂ., ಕಾರ್ಮಿಕರ ಬಾಕಿ ಪಾವತಿ 3,26,75,866 ರೂ., ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಸಾಲ ಮರುಪಾವತಿ 56 ಲಕ್ಷ ರೂ., ಎಸ್‌ಸಿಡಿಸಿಸಿ ಬ್ಯಾಂಕ್ ಸಾಲ ಬಾಕಿ 78.90 ಲಕ್ಷ ರೂ. ಹಾರಾಡಿ ಗ್ರಾ.ಪಂ. ತೆರಿಗೆ ಬಾಕಿ 4,35,350 ರೂ., ಭವಿಷ್ಯ ನಿ ಧಿಯ ಬಾಕಿ 23,71,73 ರೂ. ಪಾವತಿಸಿ ಸಂಪೂರ್ಣ ಸಾಲ ಮುಕ್ತವನ್ನಾಗಿಸಿರುತ್ತೇವೆ. ಕಾಂಗ್ರೆಸ್‌ನ ಆರೋಪ ರಾಜಕೀಯ ಪ್ರೇರಿತ ಎಂದಿದ್ದಾರೆ.
ಈ ಹಿಂದಿನ ಆಡಳಿತ ಮಂಡಳಿ ಮಾಡಿರುವ ಸಾಲ ಮತ್ತು ಬಾಕಿಯನ್ನು ಪಾವತಿಸಿ ಕಾರ್ಖಾನೆಯ ಜಾಗವನ್ನು ಉಳಿಸಿರುವ ತೃಪ್ತಿ ಇದೆ ಎಂದಿದ್ದಾರೆ
