ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ವಂಚನೆ : ತನಿಖೆಗೆ ನ್ಯಾಯಾಲಯ ಆದೇಶ – Vishwanews24
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ವಂಚನೆ : ತನಿಖೆಗೆ ನ್ಯಾಯಾಲಯ ಆದೇಶ
ಉಡುಪಿ: ಅವಿಭಜಿತ ಉಡುಪಿ ಮತ್ತು ದ.ಕ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇಲ್ಲಿ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಖಾಸಗಿ ದೂರನ್ನು ಆಡಿಷಲ್ ಸಿವಿಲ್ ಜಡ್ಜ್ ಉಡುಪಿಯಲ್ಲಿ ದಾಖಲಿಸಿದ್ದಾರೆ.
ಈ ದೂರನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಬೃಹತ್ ವಂಚನೆ ಕುರಿತು ಸೂಕ್ತ ತನಿಖೆ ಮಾಡಿ 12/12/2023ರ ಒಳಗೆ ನ್ಯಾಯಾಲಯಕ್ಕೆ ವರದಿ ನೀಡಲು ಬ್ರಹ್ಮವಾರ ಪೊಲೀಸ್ ಠಾಣೆಗೆ ಆದೇಶ ಮಾಡಿದ್ದಾರೆ. ಇತ್ತೀಚಿಗೆ ಬ್ರಹ್ಮಾವರದಲ್ಲಿ ಜಿಲ್ಲಾ ಕಾಂಗ್ರೆಸ್ ನೇತ್ರತ್ವದಲ್ಲಿ ಮತ್ತು ರೈತ ಸಂಘಟನೆಯ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿತ್ತು.
ಈ ಪ್ರಕರಣದ ಕುರಿತಾಗಿ ನ್ಯಾಯವಾದಿ ಆರ್. ಜಗನಾಥ್ ಇವರು ವಾದ ಮಂಡಿಸಿದ್ದಾರೆ.
ಕಾಪು: ಹೊಸ ದಾಖಲೆ ಬರೆಯುವತ್ತ ಉಚ್ಚಿಲ ದಸರಾ – ಇಂದು ವೈಭವದ ಬೃಹತ್ ಶೋಭಾಯಾತ್ರೆ – Vishwanews24
