ಬೆಂಗಳೂರು,: ಬ್ರಿಟನ್‌ನಿಂದ ಕರ್ನಾಟಕಕ್ಕೆ ಬಂದ 1,614 ಜನರನ್ನು ಈವರೆಗೆ ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಪೈಕಿ 26 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಕೊರೊನಾ ಸೋಂಕು ಪತ್ತೆ ಆದ ಎಲ್ಲರಿಗೂ ಸರ್ಕಾರದ ಸುಪರ್ದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಯಾರಿಗೂ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ವಿದೇಶದಿಂದ ಬಂದವರರಲ್ಲಿ ಅನೇಕರು ಇನ್ನೂ ಪತ್ತೆಯಾಗಿಲ್ಲ, ಅದರಲ್ಲೂ ಬ್ರಿಟನ್‌ನಿಂದ ಬಂದವರಿದ್ದಾರೆ. ಹಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡುವ ಕೆಲಸ ಮುಂದುವರಿದೆ” ಎಂದರು.
ಇನ್ನು “ಪರೀಕ್ಷೆಗೆ ಒಳಗಾಗದಿರುವವರು ಸರ್ಕಾರದ ಜೊತೆ ಸಹಕರಿಸಬೇಕು. ಅದು ಅವರ ಜವಾಬ್ದಾರಿಯಾಗಿದೆ. ತಲೆಮರೆಸಿಕೊಂಡು ಓಡಾಡುವುದು ಅಪರಾಧ. ಹಾಗೆಯೇ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ಬಳಿಕ ತಲೆಮರೆಸಿಕೊಂಡವರ ಪತ್ತೆ ಕುರಿತು ಗೃಹ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ” ಎಂದು ಹೇಳಿದ್ದಾರೆ.
ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…
ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…
ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ ಕಾಪು: ಕಾಪು ಕಡಲ ಕಿನಾರೆಯಲ್ಲಿ…
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…