Featured

ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? : ಪ್ರತಾಪ್‌ ಸಿಂಹ ಪೋಸ್ಟ್ -vishwanews24

ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? : ಪ್ರತಾಪ್‌ ಸಿಂಹ ಪೋಸ್ಟ್

ಮೈಸೂರು: ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? ಟಿ.ನರಸೀಪುರದಲ್ಲಿ  ಸಿಗೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ  ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್ ಹಾಕಿದ ಧಮ್ಕಿಗೆ ಉತ್ತರವಾಗಿ ಇಂದು (ಸೆ.18) ಹಿಂದೂ ಜಾಗರಣಾ ವೇದಿಕೆ ಶೋಭಾಯಾತ್ರೆ ನಡೆಸಲು ಮುಂದಾಗಿದೆ. ಈ ವಿಚಾರಕ್ಕೆ ಅವರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: 

ಟಿ. ನರಸೀಪುರ ಪಟ್ಟಣ ಇದೀಗ ಕೇಸರಿಮಯವಾಗ್ತಿದೆ. ಹಿಂದೂ ಜಾಗರಣಾ ವೇದಿಕೆ ಕರಪತ್ರಗಳನ್ನ ಮುದ್ರಿಸಿದ್ದು, ಅದರಲ್ಲಿ ಪೊಲೀಸ್ ಅಧಿಕಾರಿಯ ದರ್ಪಕ್ಕೆ ಉತ್ತರ ಕೊಡೋಣಾ ಬನ್ನಿ ಎಂದು ಜನರನ್ನ ಆಹ್ವಾನಿಸಲಾಗಿದೆ. ಮಸೀದಿ ಇರುವ ರಸ್ತೆಯನ್ನೆ ಕೇಸರಿಮಯ ಮಾಡಿ ಅದೇ ರಸ್ತೆಯಲ್ಲಿ ಶೋಭಯಾತ್ರೆ ನಡೆಸಲು ಸಿದ್ಧತೆ ನಡೆದಿದೆ. ಸಂಜೆ 4 ಗಂಟೆಗೆ ಶೋಭಾಯಾತ್ರೆ ಶುರುವಾಗಲಿದೆ. ಮಸೀದಿ ಮುಂದೆಯೇ ಈ ಯಾತ್ರೆ ಸಾಗಲಿದೆ.

ಶೋಭಾಯಾತ್ರೆ ಸಿದ್ಧತೆ ಬೆನ್ನಲ್ಲೇ ಇದಕ್ಕೆ ಕೌಂಟರ್ ಆಗಿ ಸಂವಿಧಾನ ರಕ್ಷಣಾ ಸಮಿತಿ ಅವರು ಸಂವಿಧಾನ ರಕ್ಷಣಾ ಸೌಹಾರ್ದ ರಥ ಯಾತ್ರೆ ನಡೆಸಲು ನಿರ್ಧರಿಸಿದೆ.

ಇದನ್ನೂ ಓದಿ: 

ಈ ನಡುವೆ ಇನ್ಸೆಪೆಕ್ಟರ್ ಹೇಳಿದ ಮಾತಿನ ವಿಡಿಯೋವನ್ನ ರೆಕಾರ್ಡ್ ಮಾಡಿ ಪ್ರಸಾರ ಮಾಡಿದ್ದ ಟಿ. ನರಸೀಪುರದ ಸ್ಥಳೀಯ ವಾಹಿನಿಯ ಮುಖ್ಯಸ್ಥನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಮಾಜದ ಶಾಂತಿಗೆ ಭಂಗ ತರುವ ರೀತಿ ವೀಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಾನು ಯಾವುದೇ ವೀಡಿಯೋ ತಿರುಚಿಲ್ಲ. ಇನ್ಸೆಪೆಕ್ಟರ್ ಧನಂಜಯ ಹೇಳಿದ್ದನ್ನೇ ಯಥಾವತ್ ವೀಡಿಯೋ ಹಾಕಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.

Vishwa News 24

Recent Posts

ಬೆಳ್ತಂಗಡಿ: ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಸಿಮೆಂಟ್ ಚಾವಣಿ ಕುಸಿದು ಯುವ ಕಾರ್ಮಿಕ ಸಾವು – vishwanews24

ಬೆಳ್ತಂಗಡಿ: ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಸಿಮೆಂಟ್ ಚಾವಣಿ ಕುಸಿದು ಯುವ ಕಾರ್ಮಿಕ ಸಾವು ಬೆಳ್ತಂಗಡಿ : ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ…

20 minutes ago

ಮಂಗಳೂರು :ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ – vishwanews24

ಮಂಗಳೂರು :ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಂಗಳೂರು :ನಗರದಲ್ಲಿ ಕ್ಯಾಬಿನೇಟ್ ಸಭೆ…

27 minutes ago

ಕರ್ನಾಟಕದ 23 ತಾಲೂಕುಗಳು ಬರಪೀಡಿತ ಎಂದು ಘೋಷಣೆ – vishwanews24

ಕರ್ನಾಟಕದ 23 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಒಣಹವೆ…

33 minutes ago

ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ : ಸಿಎಂ. ಡಿ ಕೆ ಶಿ – vishwanews24

ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು, ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ: ಡಿ ಕೆ ಶಿವಕುಮಾರ್…

40 minutes ago

ಮಂಗಳೂರಿನಲ್ಲಿ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ: ಕರಾವಳಿ ಜನರ ದಶಕಗಳ ಬೇಡಿಕೆಗಳಿಗೆ ಸ್ಪಂದನೆಯ ನಿರೀಕ್ಷೆ – vishwanews24

ಮಂಗಳೂರಿನಲ್ಲಿ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ: ಕರಾವಳಿ ಜನರ ದಶಕಗಳ ಬೇಡಿಕೆಗಳಿಗೆ ಸ್ಪಂದನೆಯ ನಿರೀಕ್ಷೆ ಬೆಂಗಳೂರು/ಮಂಗಳೂರು: ಕರಾವಳಿ ನಗರಿ…

59 minutes ago

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ – vishwanews24

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…

20 hours ago