ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? : ಪ್ರತಾಪ್ ಸಿಂಹ ಪೋಸ್ಟ್ -vishwanews24
ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? : ಪ್ರತಾಪ್ ಸಿಂಹ ಪೋಸ್ಟ್
ಮೈಸೂರು: ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? ಟಿ.ನರಸೀಪುರದಲ್ಲಿ ಸಿಗೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಹಾಕಿದ ಧಮ್ಕಿಗೆ ಉತ್ತರವಾಗಿ ಇಂದು (ಸೆ.18) ಹಿಂದೂ ಜಾಗರಣಾ ವೇದಿಕೆ ಶೋಭಾಯಾತ್ರೆ ನಡೆಸಲು ಮುಂದಾಗಿದೆ. ಈ ವಿಚಾರಕ್ಕೆ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:
ಟಿ. ನರಸೀಪುರ ಪಟ್ಟಣ ಇದೀಗ ಕೇಸರಿಮಯವಾಗ್ತಿದೆ. ಹಿಂದೂ ಜಾಗರಣಾ ವೇದಿಕೆ ಕರಪತ್ರಗಳನ್ನ ಮುದ್ರಿಸಿದ್ದು, ಅದರಲ್ಲಿ ಪೊಲೀಸ್ ಅಧಿಕಾರಿಯ ದರ್ಪಕ್ಕೆ ಉತ್ತರ ಕೊಡೋಣಾ ಬನ್ನಿ ಎಂದು ಜನರನ್ನ ಆಹ್ವಾನಿಸಲಾಗಿದೆ. ಮಸೀದಿ ಇರುವ ರಸ್ತೆಯನ್ನೆ ಕೇಸರಿಮಯ ಮಾಡಿ ಅದೇ ರಸ್ತೆಯಲ್ಲಿ ಶೋಭಯಾತ್ರೆ ನಡೆಸಲು ಸಿದ್ಧತೆ ನಡೆದಿದೆ. ಸಂಜೆ 4 ಗಂಟೆಗೆ ಶೋಭಾಯಾತ್ರೆ ಶುರುವಾಗಲಿದೆ. ಮಸೀದಿ ಮುಂದೆಯೇ ಈ ಯಾತ್ರೆ ಸಾಗಲಿದೆ.
ಶೋಭಾಯಾತ್ರೆ ಸಿದ್ಧತೆ ಬೆನ್ನಲ್ಲೇ ಇದಕ್ಕೆ ಕೌಂಟರ್ ಆಗಿ ಸಂವಿಧಾನ ರಕ್ಷಣಾ ಸಮಿತಿ ಅವರು ಸಂವಿಧಾನ ರಕ್ಷಣಾ ಸೌಹಾರ್ದ ರಥ ಯಾತ್ರೆ ನಡೆಸಲು ನಿರ್ಧರಿಸಿದೆ.
ಇದನ್ನೂ ಓದಿ:
ಈ ನಡುವೆ ಇನ್ಸೆಪೆಕ್ಟರ್ ಹೇಳಿದ ಮಾತಿನ ವಿಡಿಯೋವನ್ನ ರೆಕಾರ್ಡ್ ಮಾಡಿ ಪ್ರಸಾರ ಮಾಡಿದ್ದ ಟಿ. ನರಸೀಪುರದ ಸ್ಥಳೀಯ ವಾಹಿನಿಯ ಮುಖ್ಯಸ್ಥನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಮಾಜದ ಶಾಂತಿಗೆ ಭಂಗ ತರುವ ರೀತಿ ವೀಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಾನು ಯಾವುದೇ ವೀಡಿಯೋ ತಿರುಚಿಲ್ಲ. ಇನ್ಸೆಪೆಕ್ಟರ್ ಧನಂಜಯ ಹೇಳಿದ್ದನ್ನೇ ಯಥಾವತ್ ವೀಡಿಯೋ ಹಾಕಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.
