‘ನೀರ್ ದೋಸೆ’ ಬ್ಯೂಟಿಫುಲ್ ಮನಸುಗಳು’ ಸಿನಿಮಾ ನಿರ್ಮಾಪಕ ಅರೆಸ್ಟ್
ಬೆಂಗಳೂರು: ಸ್ಯಾಂಡಲ್ ವುಡ್ ನ ‘ನೀರ್ ದೋಸೆ’ ಸಿನಿಮಾ ನಿರ್ಮಾಪಕ ಆರ್. ಪ್ರಸನ್ನರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪ್ರಸನ್ನ 2015 ರಲ್ಲಿ ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕಿನಲ್ಲಿ ಮನೆ ಅಡಮಾನವಿಟ್ಟು ಸಾಲ ಪಡೆದಿಕೊಂಡಿದ್ದರು ಎನ್ನಲಾಗಿದ್ದು. ಇದಲ್ಲದೇ ಹೊಸಕೆರೆಹಳ್ಳಿ ಮನೆಯ ಭೂ ದಾಖಲೆಯನ್ನು ಕಲರ್ ಜೆರಾಕ್ಸ್ ಮಾಡಿಸಿ ಮೂರು ಕಡೆ ಸಾಲ ಪಡೆದಿದ್ದರು ಅಂತ ತಿಳಿದು ಬಂದಿದೆ.
ಇನ್ನು ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕ್, ಕಿಲಾರಿ ರಸ್ತೆಯ ದೈವಜ್ಞ ಕೊ ಆಪರೇಟಿವ್ ಸೊಸೈಟಿ ಹಾಗು ಮಾರ್ಗದರ್ಶಿ ಚಿಟ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಪ್ರಸನ್ನ ಎಲ್ಲ ಬ್ಯಾಂಕ್ ಗಳಿಗೂ ಒಂದೇ ಆಸ್ತಿ ಪತ್ರ ನೀಡಿ ಒಂದೇ ವಾರದಲ್ಲಿ ಒಂದು ಕೋಟಿ ಸಾಲ ಪಡೆದಿದ್ದರು. ಬ್ಯಾಂಕಿನವರು ಆಸ್ತಿ ಪತ್ರ ಪರಿಶೀಲನೆ ನಡೆಸಿದಾಗ ಕಲರ್ ಜೆರಾಕ್ಸ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೀವಿ ಎಂದಾಗ ಎರಡು ಕಂತುಗಳಲ್ಲಿ 17 ಲಕ್ಷ ರೂ. ಹಣ ವಾಪಸ್ ಮಾಡದ್ದರಂತೆ.
ಇನ್ನು ಬ್ಯಾಂಕಿಗೆ ಉಳಿದ 17 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ ಪ್ರಸನ್ನ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ದಾಶಿಕಾ ರಮೇಶ್ ದೂರು ನೀಡಿದ್ದರು. ಸದ್ಯಕ್ಕೆ ಶೇಷಾದ್ರಿಪುರಂ ಪೊಲೀಸರು ನಿರ್ಮಾಪಕ ಪ್ರಸನ್ನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
