ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನಗಳು ಸೃಷ್ಟಿಯಾಗುತ್ತದೆ : ಟಿಎಂಸಿ ನಾಯಕ ಶೇಖ್ ಅಲಾಮ್ -Vishwanews24

Featured, ರಾಷ್ಟ್ರ ನ್ಯೂಸ್

ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನಗಳು ಸೃಷ್ಟಿಯಾಗುತ್ತದೆ : ಟಿಎಂಸಿ ನಾಯಕ ಶೇಖ್ ಅಲಾಮ್ -Vishwanews24

ಕೋಲ್ಕತಾ:ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನಗಳು ಸೃಷ್ಟಿಯಾಗುತ್ತದೆ ಎಂದು ಟಿಎಂಸಿ ನಾಯಕ ಶೇಖ್ ಅಲಾಮ್ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದು, ಈ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ.

ಪಶ್ಚಿಮಬಂಗಾಳದ ಬಿಜೆಪಿ ಮುಖಂಡ ಅಮಿತ್ ಮಾಳವೀಯ ಅವರು ಅಲಾಮ್ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಮಾಡುವ ಮೂಲಕ ಇದೊಂದು ಉದ್ದೇಶಪೂರ್ವಕವಾಗಿ ನೀಡಿರುವ ಹೇಳಿಕೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಮಾರ್ಚ್ 31 ರೊಳಗೆ ಪಾನ್, ಆಧಾರ್ ಕಾರ್ಡ್ ಲಿಂಕ್ ಮಾಡಿ.. -Vishwanews24

ಪಶ್ಚಿಮಬಂಗಾಳದಲ್ಲಿ ಹಿಂದೂಗಳನ್ನು ಮಮತಾ ಅವರು 2ನೇ ದರ್ಜೆಯ ನಾಗರಿಕರಂತೆ ನಡೆಸಿಕೊಂಡಿದ್ದಾರೆ. ಅವರ ಆಪ್ತ ಶೇಖ್ ರಿಂದ ಇಂಥ ಹೇಳಿಕೆಗಳು ಬರುತ್ತವೆ ಎಂದು ಮಾಳವೀಯ ತಿರುಗೇಟು ನೀಡಿದ್ದಾರೆ.
ಟಿಎಂಸಿಯ ಶೇಖ್ ಅಲಾಮ್ ರಂತಹ ನಾಯಕರು ನಾಲ್ಕು ಪಾಕಿಸ್ತಾನ ರಚನೆಯಾಗಬೇಕು ಎಂಬ ದಿಟ್ಟತನ ತೋರಿಸುತ್ತಾರೆ. ಯಾಕೆಂದರೆ ಮಮತಾ ಬ್ಯಾನರ್ಜಿಯನ್ನು ಕಳೆದ ಹತ್ತು ವರ್ಷಗಳ ರಾಜಕೀಯದಲ್ಲಿ ಒಲೈಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿರುತ್ತಾರೆ ಎಂದು ಮಾಳವೀಯ ಟ್ವೀಟ್ ನಲ್ಲಿ ದೂರಿದ್ದಾರೆ.

“ನಾವು ಅಲ್ಪಸಂಖ್ಯಾತರು ಶೇ.30ರಷ್ಟಿದ್ದೇವೆ, ಉಳಿದವರು ಶೇ.70ರಷ್ಟಿದ್ದಾರೆ. ಆ ನಿಟ್ಟಿನಲ್ಲಿ ಅವರು(ಬಿಜೆಪಿ) ಬಂಗಾಳದಲ್ಲಿ ಶೇ.70ರಷ್ಟಿರುವ ಜನಸಂಖ್ಯೆ ಆಧಾರದ ಮೇಲೆ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಒಂದು ವೇಳೆ ಶೇ.30ರಷ್ಟಿರುವ ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನ ರಚಿಸಬಹುದು, ಆಗ ಭಾರತದಲ್ಲಿರುವ ಶೇ.70ರಷ್ಟು ಜನ ಎಲ್ಲಿಗೆ ಹೋಗುತ್ತಾರೆ ಎಂದು ಅಲಾಮ್ ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಉಡುಪಿ: ಗ್ಯಾಸ್ ಬೆಲೆ ಗಗನಕ್ಕೇರಿದರೂ ಸಂಸದೆ ಶೋಭಾ ಕರಂದ್ಲಾಜೆ, ಲೋಕಸಭೆ ಸದಸ್ಯರು ಯಾರು ಮಾತನಾಡುತ್ತಿಲ್ಲ : ವಿನಯ್ ಕುಮಾರ್ ಆಕ್ರೋಶ -Vishwanews24

ಈ ಹೇಳಿಕೆಯ ವಿವಾದ ಜೋರಾಗುತ್ತಲೇ ಸ್ಪಷ್ಟನೆ ನೀಡಿರುವ ಶೇಖ್ ಅಲಾಮ್, ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾದರೆ ಎಲ್ಲರೂ ಒಗ್ಗೂಡುತ್ತಾರೆ ಎಂದಷ್ಟೇ ನಾನು ಪ್ರಸ್ತಾಪಿಸಿದ್ದೆ ಎಂದಿದ್ದಾರೆ