Featured

ಭಾರತದಲ್ಲಿ ತಾವು ಅಸುರಕ್ಷಿತರೆಂದು ಹೇಳುವವರ ಮೇಲೆ ಬಾಂಬ್‌ ಹಾಕಿ ಉಡಾಯಿಸಬೇಕು : ಬಿಜೆಪಿ ಶಾಸಕ ವಿಕ್ರಮ್ ಸೈನಿ

ಮುಜಫರ್ ನಗರ : ಭಾರತದಲ್ಲಿ ಅಭದ್ರತೆ ಇದೆ ಎಂದವರಿಗೆ ಬಾಂಬ್ ಹಾಕಿ ಉಡಾಯಿಸುತ್ತೇನೆ ಎಂದು ಮುಜಫರ್ ನಗರ ಬಿಜೆಪಿ ಶಾಸಕ ವಿಕ್ರಮ್ ಸೈನಿ ಹೇಳಿಕೆ ನೀಡಿದ್ದಾರೆ. 

ಭಾರತದಲ್ಲಿ ಆತಂಕವಿದೆ ಎಂದವರು ದೇಶದ್ರೋಹಿಗಳು, ಭಾರತದಲ್ಲಿ ವಾಸಿಸಲು ಆತಂಕವಿದೆ ಎಂದವರಿಗೆ ಬಾಂಬ್ ಹಾಕಿ ಕೊಲ್ಲಬೇಕು, ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಅವರು  ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಾಸಕ  “ಭಾರತದಲ್ಲಿ ತಾವು ಅಸುರಕ್ಷಿತರೆಂದು ಹೇಳುವವರ ಮೇಲೆ ಬಾಂಬ್‌ ಹಾಕಬೇಕು – ಇದು ನನ್ನ ವೈಯಕ್ತಿಕ ಅನ್ನಿಸಿಕೆ. ನಿಜಕ್ಕಾದರೆ ಹಾಗೆ ಹೇಳುವವರು ದೇಶ ದ್ರೋಹಿಗಳು. ಅಂಥವರನ್ನು ಶಿಕ್ಷಿಸಲು ಕಾನೂನನ್ನು ತರಬೇಕು, ಏಕೆಂದರೆ ಈ ರೀತಿಯ ಹೇಳಿಕೆಗಳು ದೇಶದ್ರೋಹದ ಕೃತ್ಯವಾಗುತ್ತದೆ. ನನಗೊಂದು ಸಚಿವ ಪದ ಕೊಡಿ. ನಾನು ಇಂಥವರ ಮೇಲೆ ಬಾಂಬ್‌ ಹಾಕುತ್ತೇನೆ; ಈ ರೀತಿಯ ಹೇಳಿಕೆ ನೀಡುವ ಯಾರನ್ನೂ ಬಿಡದೆ ಬಾಂಬ್‌ ಹಾಕಿ ನಾಶ ಮಾಡುತ್ತೇನೆ’.

“ಹಮ್ ತೋ ದೇಶ್ ದೀವಾನೇ ಹೇ” ಎಂದ ಅವರು “ದೇಶದಲ್ಲಿ ಅಸುರಕ್ಷತೆಯ ಭಾವನೆ ಹೊಂದಿರುವವರು ಒಂದೋ ದೇಶ ಬಿಟ್ಟು ತೆರಳಬೇಕು ಇಲ್ಲವೇ ಸರಕಾರ ಅವರಿಗೆ ಏನಾದರೂ ಏರ್ಪಾಟು ಮಾಡಬೇಕು,” ಎಂದು ಆಗ್ರಹಿಸಿದರು.

ಭಾರತದಲ್ಲಿ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾನೂನು ರೆಚಿಸುವಂತೆ ಆಗ್ರಹಿಸಿರುವ ಅವರು ಅಂತಹವರನ್ನು ದೇಶದ್ರೋಹಿಗಳು ಎಂದು ಹೇಳಿದರು.

Vishwa News 24

Recent Posts

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

6 minutes ago

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ – vishwanews24

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋಗಿ ಸಾವನ್ನಪ್ಪಿದ್ದ 11 ಮಂದಿಯ…

16 minutes ago

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು – vishwanews24

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು ಜೈಪುರ: ಸ್ಕಾರ್ಪಿಯೋ ಎಸ್‌ಯುವಿ  ಕಾರೊಂದು ಸುಮಾರು 700 ಅಡಿ ಕಂದಕಕ್ಕೆ…

23 minutes ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ ಕೊಲ್ಲೂರು: ಮೇ 17ರ…

37 minutes ago

ಮಂಗಳೂರು : ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ – vishwanews24

ಮಂಗಳೂರು : ಹೆಚ್ಚುತ್ತಿರುವ ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಂಗಳೂರು : ಆಫ್ರಿಕಾ…

1 hour ago

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago