ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ -Vishwanews24
ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ -Vishwanews24
Delhi: PM Narendra Modi inaugurates India’s first driverless train on Delhi Metro’s Magenta Line & launches National Common Mobility Card on the Airport Express Line, via video conferencing. pic.twitter.com/QpDTPZ8Z3h
— ANI (@ANI) December 28, 2020
ನವದೆಹಲಿ: ದೆಹಲಿ ಮೆಟ್ರೊದ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ದೆಹಲಿ ಮೆಟ್ರೊದ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕರಹಿತ ರೈಲಿನ ಉದ್ಘಾಟನಾ ಕಾರ್ಯಕ್ರಮ ಮತ್ತು ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್(ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್)ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ಮೊದಲ ಚಾಲಕರಹಿತ ಮೆಟ್ರೋ ರೈಲಿನ ಉದ್ಘಾಟನೆಯು ಭಾರತವು ಸ್ಮಾರ್ಟ್ ವ್ಯವಸ್ಥೆಗಳತ್ತ ಎಷ್ಟು ವೇಗವಾಗಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಅಟಲ್ ಜೀ ಪ್ರಯತ್ನದಿಂದ ದೇಶದ ಮೊದಲ ಮೆಟ್ರೋವನ್ನು ಪ್ರಾರಂಭಿಸಲಾಯಿತು. 2014 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಕೇವಲ 5 ನಗರಗಳು ಮಾತ್ರ ಮೆಟ್ರೋ ಸೇವೆಗಳನ್ನು ಹೊಂದಿದ್ದವು ಮತ್ತು ಇಂದು 18 ನಗರಗಳು ಮೆಟ್ರೋ ಸಪುಲಭ್ಯ ಪಡೆದಿವೆ,. ಅಲ್ಲದೆ 2025 ರ ಹೊತ್ತಿಗೆ ನಾವು ಈ ಸೇವೆಯನ್ನು 25 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಗುರಿ ಹಾಕಿಕೊಂಡಿದ್ದೇವೆ.
ಮೆಟ್ರೊ ಸೇವೆಗಳ ವಿಸ್ತರಣೆಗೆ “ಮೇಕ್ ಇನ್ ಇಂಡಿಯಾ” ಬಹಳ ಮುಖ್ಯ ವೇದಿಕೆಯಾಗಿದೆ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ, ವಿದೇಶಿ ಕರೆನ್ಸಿಯನ್ನು ಉಳಿಸುತ್ತದೆ ಮತ್ತು ಭಾರತೀಯ ಜನರಿಗೆ ಹೆಚ್ಚಿನ ಉದ್ಯೋಗವನ್ನು ನೀಡುತ್ತದೆ “ಎಂದು ಮೋದಿ ಹೇಳಿದರು.
