ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿಯವರನ್ನು ಮನವಿ ಮಾಡಿಕೊಳ್ಳುತ್ತೇನೆ : ಬಿ ಸಿ ಪಾಟೀಲ್ -Vishwanews24
ಭಾರತದ ವಿರುದ್ಧ ಮಾತನಾಡುವವರನ್ನು, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಕ್ಕುವ ಕಾನೂನನ್ನು ಜಾರಿಗೆ ತರಬೇಕು..
ದೇಶದ್ರೋಹಿಗಳನ್ನು ಶಿಕ್ಷಿಸುವ ಕಠಿಣ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿಯವರು ತರಬೇಕು..
ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿಯವರನ್ನು ಮನವಿ ಮಾಡಿಕೊಳ್ಳುತ್ತೇನೆ..
ಚಿತ್ರದುರ್ಗ: ಭಾರತದ ವಿರುದ್ಧ ಮಾತನಾಡುವವರನ್ನು, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಕ್ಕುವ ಕಾನೂನನ್ನು ಜಾರಿಗೆ ತರಬೇಕು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಇದಕ್ಕೆ ಚೀನಾ ದೇಶದ ಉದಾಹರಣೆ ನೀಡಿದ ಅವರು, ದೇಶದ್ರೋಹಿಗಳನ್ನು ಶಿಕ್ಷಿಸುವ ಕಠಿಣ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿಯವರು ತರಬೇಕು ಎಂದು ಮನವಿ ಮಾಡಿಕೊಂಡರು.
ಈ ದೇಶದಲ್ಲಿದ್ದುಕೊಂಡು ಇಲ್ಲಿನ ನೆಲ, ಜಲ, ಗಾಳಿ, ಆಹಾರವನ್ನು ಸೇವಿಸುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವುದಾದರೆ ಅವರು ಇಲ್ಲೇಕೆ ಇರಬೇಕು, ಚೀನಾದಲ್ಲಿ, ತಮ್ಮ ದೇಶದ ವಿರುದ್ಧ ಮಾತನಾಡಲು ಅಲ್ಲಿನ ಜನರು ಭಯಪಡುತ್ತಾರೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿಯವರನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದರು.
