ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಕಾಂಗ್ರೇಸ್ ಅಭ್ಯರ್ಥಿ- ಜಿ.ಎಸ್.ಬಿ ಸಮುದಾಯಕ್ಕೆ ಮಣೆ ಹಾಕಿದ ಕಾಂಗ್ರೇಸ್.: vishwanews24

Featured, ಉಡುಪಿ

ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಕಾಂಗ್ರೇಸ್ ಅಭ್ಯರ್ಥಿ- ಅಂತಿಮ ಹಂತದಲ್ಲಿ ಜಿ.ಎಸ್.ಬಿ ಸಮುದಾಯಕ್ಕೆ ಮಣೆ ಹಾಕಿದ ಕಾಂಗ್ರೇಸ್.

ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ 23 ವಾರ್ಡ್ಗಳಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ನಾಮಪತ್ರ ಸಲ್ಲಿಸುವ ಪ್ರಕ್ರೀಯೆ ಪೂರ್ಣಗೊಂಡಿದೆ.
ಬಿಜೆಪಿ ಪಕ್ಷದಿಂದ ಜಿ.ಎಸ್.ಬಿ. ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ಗೊಂದಲ ಶುರುವಾಗುತ್ತಿದ್ದಂತೆ ಕಾಂಗ್ರೇಸ್ ಪಾರ್ಟಿ ಹರೀಶ್ ನಾಯಕ್ ಅವರಿಗೆ ಭಾರತ್ ನಗರ ವಾರ್ಡಿನಲ್ಲಿ ಸೀಟ್ ನೀಡಿ ಜಿಎಸ್‌ಬಿಗಳ ಒಲವು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದಂತಿದೆ.ಇನ್ನೂ ಭಾರತ್ ನಗರ ವಾರ್ಡಿನಲ್ಲಿ ಜಿಎಸ್‌ಬಿ ಮತ ಕೂಡ ಈ ಚುನಾವಣೆಗೆ ಅತ್ಯಂತ ನಿರ್ಣಾಯಕ ಮತ ಆಗಿರುವುದರಿಂದ ಈ ಯತ್ನ ನಡೆದಿರಿಬಹುದೆಂದು ಅಂದಾಜಿಸಲಾಗಿದೆ.


ಪುರಸಭೆ ಆಗಿದ್ದಿನಿಂದ ಜಿಎಸ್‌ಬಿಗಳಿಗೆ ಮಣೆ ಹಾಕಿದ್ದ ಕಾಂಗ್ರೇಸ್ ಪಾರ್ಟಿ

ಜಿಎಸ್‌ಬಿಗಳ ಮತ ಹಿಂದೂ ವೋಟ್ ಬ್ಯಾಂಕ್ ಎಂದು ಗೊತ್ತಿದ್ದರೂ ಕೂಡ ಕಳೆದ ಪುರಸಭಾ ಚುನಾವಣೆ ಸಮಯದಲ್ಲಾಗಲಿ ಅಥವಾ ಅಧಿಕಾರ ಚುಕ್ಕಾಣಿ ಹಿಡಿದ ಸಮಯದಲ್ಲಾಗಲಿ ಈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂಬ ಗೋಜಿಗೆ ಹೋಗದೆ ಬಿಜೆಪಿ ಸುಮ್ಮನೆ ಕೂರಿತ್ತು. ಆದರೇ ಕಾಪು ಪುರಸಭೆ ಘೋಷಣೆಯಾಗಿ ಚುನಾವಣೆ ನಡೆದು ಆಡಳಿತ ಚುಕ್ಕಾಣಿ ಹಿಡಿದ ಸಮಯದಲ್ಲೂ ಹಿಂದೂ ವೋಟ್ ಬ್ಯಾಂಕ್ ಅನ್ನಿಸಿಕೊಂಡಿದ್ದರೂ ಕೂಡ ಜಿಎಸ್‌ಬಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಅನ್ನುವ ಕಾರಣದಿಂದ ಮತ್ತು ಕಾಪು ಪೇಟೆ ಭಾಗದಲ್ಲಿ ಅತ್ಯಂತ ಮೆಜಾರಿಟಿ ಕಮ್ಯೂನಿಟಿ ಆಗಿರುವುದರಿಂದ ಹರೀಶ್ ನಾಯಕ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ ನಾಮನಿರ್ದೇಶನ ಪುರಸಭಾ ಸದಸ್ಯನ್ನನಾಗಿ ಮಾಡಿತ್ತು. ಆದರೇ ಇ ಭಾರಿ ಮಾತ್ರ ಕಾಂಗ್ರೇಸ್ ನಾಯಕ್ ಅವರನ್ನು ನೇರವಾಗಿ ಚುನಾವಣ ರಣರಂಗಕ್ಕೆ ಬಿಟ್ಟು ಫಲಿತಾಂಶದ ಹಾದಿಯನ್ನು ಕಾದುನೋಡಿದಂತೆ ಇದೆ.


ನಗುಮೊಗದ ಜನಸೇವಕ ಹರೀಶ್ ನಾಯಕ್
ಹರೀಶ್ ನಾಯಕ್ ಅಂದರೆ ಅದು ಸದಾ ಹಸನ್ಮುಖಿ ವ್ಯವಹಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಕಾಪು ಪೇಟೆ ಭಾಗದಲ್ಲಿ ವಿಸ್ತರಿಸಿ ಹತ್ತಾರು ದುಡಿಯುವ ಕೈಗಳಿಗೆ ಕೆಲಸ ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಆರೋಗ್ಯ,ಶಿಕ್ಷಣ, ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುವ ಮುಖಾಂತರ ರಾಜಕೀಯದಲ್ಲಿ ಹಂತಹAತವಾಗಿ ಮೆಟ್ಟಿಲು ಹತ್ತಿಬಂದಿರುವ ಯುವ ನಾಯಕ. ಯಾವುದೇ ಸಮಯದಲ್ಲೂ ಸದಾ ಹಸನ್ಮುಖಿಯಿಂದ ಬರಮಾಡಿಕೊಂಡು ಗೌರವಿಸುವ ಮತ್ತು ಪ್ರೀತಿಸುವ ಗುಣಕ್ಕೆ ಮತ್ಸರ ಪಡುವಂತಿಲ್ಲ ಎಂಬುದು ಅಭಿಮಾನಿಗಳ ಮಾತು.
ಇನ್ನೂ ಕೋವಿಡ್ ಸಮಯದಲ್ಲೀ ಪ್ರಚಾರವಿಲ್ಲದೆ ಮೊದಲು ನೂರಾರು ಕುಟುಂಬಗಳಿಗೆ ಆಹಾರದ ಪಡಿತರ ಕಿಟ್ ವಿತರಸಿದ ಕೀರ್ತಿ ಹರೀಶ್ ನಾಯಕ್ ಅವರಿಗೆ ಸಲ್ಲಬೇಕಾಗುತ್ತೆ.

ಒಟ್ಟಾರೆಯಾಗಿ ಈ ಬಾರಿಯ ಪುರಸಭಾ ಚುನಾವಣ ರಣರಂಗ ಕೇವಲ ಕೂತುಹಲಕಾರಿಯಾಗಿರುವುದು ಮಾತ್ರವಲ್ಲದೆ ಎರಡು ರಾಷ್ಟಿçÃಯ ಪಕ್ಷಗಳಿಗೆ ಮುಂದಿನ ವಿಧಾನಸಭಾ ಚುನಾವಣೆ ಅಡಿಗಲ್ಲಾದರೆ, ಎಸ್.ಡಿ.ಪಿ.ಐ, ಜೆ.ಡಿ.ಎಸ್ ಪಾರ್ಟಿಗೆ ಖಾತೆ ತೆರೆಯುವ ಹಂಬಲ ಜಾಸ್ತಿಯಾಗಿದೆ.
ಇನ್ನೂ ಭಾರತ್‌ನಗರ ವಾರ್ಡಿನಲ್ಲಿ ನಾಲ್ಕು ಮಂದಿ ಸ್ಪರ್ಧೆಯಲ್ಲಿದ್ದು ಹರೀಶ್ ನಾಯಕ್ ಅವರ ಪಾಲಿಗೆ ವಿಜಯಲಕ್ಷಿö್ಮÃ ಒಲಿದು ಬರುವಳೋ ಮತದಾರ ಕೈಹಿಡಿಯುತ್ತಾನೋ ಕಾದು ನೋಡಬೇಕಿದೆ.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್24